ಪುತ್ತೂರು : ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಯಿಂದ ತಿಂಗಳಾಡಿಯಲ್ಲಿ ಸೆಪ್ಟೆಂಬರ್ 15 ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು. ದಿನಸಿ ತರಲೆಂದು ಅಂಗಡಿಗೆ ಬಂದ ಮಹಿಳೆಯ ಮೇಲೆ ಹಾಡಹಗಲೇ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ.
ಯಾವುದೇ ಭಯವಿಲ್ಲದೆ ಈ ರೀತಿಯ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿರುವುದು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
Kshetra Samachara
15/09/2022 11:14 am