ಸುಳ್ಯ; ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರಶಾಂತ್ ರೈ ಎಂಬವರಿಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನಿನ್ನೆ ಸಂಜೆ ದೂರು ದಾಖಲಾಗಿತ್ತು. ಇದೀಗ ಬೆದರಿಕೆ ಹಾಕಿದ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಫೀಕ್ ಸಹೋದರ ಸಪ್ರೀದ್ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಬೆದರಿಕೆ ಕರೆಯ ಬಗ್ಗೆ ಮಾಹಿತಿ ತಿಳಿಯುತ್ತಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಸಪ್ರೀದ್ ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದರು. ಬಂಧಿಸದಿದ್ದರೆ ಬೆಳ್ಳಾರೆ ಬಂದ್‌ಗೆ ಕರೆ ನೀಡುವುದಾಗಿ ಸಂಘಟನೆಯ ಪ್ರಮುಖರು ಹೇಳಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸ್ರು ಮಂಗಳೂರು ಬಳಿ ಕೆಲಸದಲ್ಲಿದ್ದ ಆರೋಪಿ ಸಪ್ರೀದ್ ಬಂಧಿಸಿ ವಿಚಾರಣೆಗೆ ಬೆಳ್ಳಾರೆಗೆ ಕರೆತಂದಿರುವುದ್ದಾಗಿ ತಿಳಿದುಬಂದಿದೆ.
Kshetra Samachara
11/09/2022 03:03 pm