ಪಡುಬಿದ್ರಿ : ಪತಿಯೊಬ್ಬ ತನ್ನ ಹೆಂಡತಿಯ ಹೆಸರಿನಲ್ಲಿ ಸಾಲ ಮಾಡಿ ಅದನ್ನು ತೀರಿಸದೆ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಆಡಿ ಆಕೆಯ ಸಾವಿಗೆ ಕಾರಣನಾಗಿದ್ದಾನೆ! ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.ಪಡುಬಿದ್ರಿ ಠಾಣೆ ವ್ಯಾಪ್ತಿಯ ವಿದ್ಯಾ(29) ಮೃತ ದುರ್ದೈವಿ.
ವಿದ್ಯಾ ಬಡಾ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಯತಿನ್ ರಾಜ್ ನನ್ನು 2017ರಲ್ಲಿ ವಿವಾಹವಾಗಿದ್ದರು. ಪ್ರಾರಂಭದಿಂದಲೂ ಗಂಡನ ಮನೆಯಲ್ಲಿ ವಿದ್ಯಾಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು.
ಗಂಡ ಯತಿನ್ ರಾಜ್ ಸರಿಯಾಗಿ ಕೆಲಸ ಮಾಡದೇ ವಿದ್ಯಾಳಿಂದ ಹಲವು ಬ್ಯಾಂಕ್, ಸೊಸೈಟಿ ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡುತ್ತಿದ್ದ. ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ವಿದ್ಯಾ ಯತಿನ್‌ರಾಜ್ ಜತೆ ಮನೆಯಿಂದ ಹೊರಬಂದು ಬೇರೆ ಕಡೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲೂ ಆರೋಪಿ ಗಂಡನ ಕಿರುಕುಳ ತಪ್ಪಿರಲಿಲ್ಲ.
ಸಾಲದಿಂದ ನೊಂದು ಕಂಗೆಟ್ಟಿದ್ದ ವಿದ್ಯಾ ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾರಿಂದಲೂ ತಾನು ಸಾಲವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದರೆ ಅವರಿಂದ ಮಾಡಿಸಿದ ಸಾಲ ತೀರುತ್ತದೆ ಎಂಬ ಕಾರಣಕ್ಕೆ ಯತಿನ್ ಯೋಜನೆ ರೂಪಿಸಿದ್ದಾನೆ. ಇಬ್ಬರೂ ವಿಷ ಸೇವಿಸಿ ಸಾಯೋಣವೆಂದು ಪತ್ನಿಯನ್ನು ನಂಬಿಸಿ, ಅವಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷ ಕುಡಿಸಿ, ಬಳಿಕ ತನ್ನ ಮೇಲೆ ಅನುಮಾನ ಬರಬಾರದೆಂದು ತಾನೂ ಸ್ವಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ನಾಟಕ ಮಾಡಿ ಹೆಂಡತಿಯನ್ನು ಕೊಲೆಗೈದಿದ್ದಾನೆ.ಇದೀಗ ಪತಿ ಹಾಗೂ ಆತನ ಮನೆಯವರ ವಿರುದ್ಧ ಮೃತ ಮಹಿಳೆಯ ಅಕ್ಕ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
08/09/2022 03:13 pm