ಬಂಟ್ವಾಳ: ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಕಳಾಯಿಯಲ್ಲಿ ನಡೆದಿದೆ.
ಕಳಾಯಿ ತಾಳಿಪಾಡಿ ನಿವಾಸಿ ಹಕೀಂ ಎಂಬುವರ ಪುತ್ರ ಮಾಝಿನ್ (12) ಮೃತ ಬಾಲಕ. ಗುರುವಾರ ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಮಾಝೀನ್ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ತೀವ್ರ ಅಸ್ವಸ್ಥರಾಗಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Kshetra Samachara
02/09/2022 11:47 am