ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮನೆಯಲ್ಲಿ ಅಕ್ರಮ ಪಡಿತರ ಅಕ್ಕಿದಾಸ್ತಾನು: ಅಧಿಕಾರಿಗಳಿಂದ ದಾಳಿ!

ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿದ ಆಹಾರ ಇಲಾಖೆಯ ಅಧಿಕಾರಿಗಳು 22ಸಾವಿರ ರೂ. ಮೌಲ್ಯದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಗಂಗೊಳ್ಳಿ ಬರ್‌ಗೇರಿ ನಿವಾಸಿ ಗಣೇಶ ಶೇರಿಗಾರ ಎಂಬವರ ಮನೆಯಲ್ಲಿ ಪಡಿತರ ಅಕ್ಕಿಯನ್ನು 3 ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲಿ 10 ಕ್ವಿಂಟಾಲ್ ಕೊಚ್ಚಿಗೆ ಅಕ್ಕಿ ಇರುವುದು ಕಂಡುಬಂದಿದೆ. ಸ್ವಾಧೀನಪಡಿಸಿಕೊಂಡ ಅಕ್ಕಿಯ ಮೌಲ್ಯ 22ಸಾವಿರ ರೂಪಾಯಿ ಆಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

28/08/2022 01:32 pm

Cinque Terre

6.01 K

Cinque Terre

4

ಸಂಬಂಧಿತ ಸುದ್ದಿ