ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೊಳಿ:ಯಕ್ಷಗಾನ ಕಲಾವಿದ ಆತ್ಮಹತ್ಯೆ

ಮುಲ್ಕಿ: ಕಿನ್ನಿಗೋಳಿ ಸಮೀಪದ ಕೊಡೆತ್ತೂರು ನಿವಾಸಿ ಯಕ್ಷಗಾನ ಕಲಾವಿದ ಶಂಭುಕುಮಾರ್ (48) ಉಲ್ಲಂಜೆ ಬಳಿಯ ತಮ್ಮ ನಿರ್ಮಾಣ ಹಂತದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಯಕ್ಷಗಾನ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರು ಮೇಳ, ಬಪ್ಪನಾಡು ಮೇಳ ಮತ್ತು ಪ್ರಸ್ತುತ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನದ ಹೆಸರಿನೊಂದಿಗೆ ಕಳೆದ ಕೆಲ ವರ್ಷಗಳಿಂದ ಚಿಕ್ಕ ಮೇಳವನ್ನು ನಡೆಸುತ್ತಿದ್ದು ಈ ಬಾರಿ ಅದೇ ಹೆಸರಿನಲ್ಲಿ ಎರಡು ಚಿಕ್ಕ ಮೇಳವನ್ನು ನಡೆಸುತ್ತಿದ್ದು ಈ ಹಿಂದೆ ಬಪ್ಪನಾಡು ಯಕ್ಷಗಾನ ಮೇಳದಲ್ಲಿ ಸೇವೆ ಸಲ್ಲಿಸಿದ್ದರು.

ಗುರುವಾರ ಬೆಳಿಗ್ಗೆ ಕಿನ್ನಿಗೋಳಿ ಸಮೀಪದ ಉಲ್ಲಂಜೆ ಕೇಶವರ ಭೂಮಿ ಬಳಿ ಕಳೆದ ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ತಮ್ಮ ನೂತನ ಮನೆ ಕೋಣೆಯೊಳಗೆ ಚೂಡಿದಾರ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟು ಅತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದ್ದು ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/08/2022 04:57 pm

Cinque Terre

8.12 K

Cinque Terre

0

ಸಂಬಂಧಿತ ಸುದ್ದಿ