ಬ್ರಹ್ಮಾವರ: ತಾಲೂಕು ವ್ಯಾಪ್ತಿಯ ಮಾಬುಕಳ ಸೇತುವೆ ಬಳಿ ಎರಡು ದಿನಗಳ ಹಿಂದೆ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಆರ್‌ಟಿಓ ಏಜೆಂಟ್, ಕೊಡಂಕೂರು ನಿವಾಸಿ ಅಶೋಕ್ ಸುವರ್ಣ(46) ಅವರ ಮೃತದೇಹ ಇವತ್ತು ನದಿಯಲ್ಲಿ ಪತ್ತೆಯಾಗಿದೆ. ಅಶೋಕ್ ಅವರು ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಶುಕ್ರವಾರ ಬೈಕ್ ಇಟ್ಟು ಅಶೋಕ್ ಸುವರ್ಣ ನಾಪತ್ತೆಯಾಗಿದ್ದರು. ನಿನ್ನೆಯಿಂದ ಆಪದ್ಭಾಂಧವ, ಮುಳುಗು ತಜ್ಞ ಈಶ್ವರ್ ಮಲ್ಪೆ ನದಿಯಲ್ಲಿ ಹುಟುಕಾಟ ನಡೆಸಿದ್ದರು. ಇಂದು ಮಾಬುಕಳದ ಸೀತಾನದಿ ಯಲ್ಲಿ ಅಶೋಕ್ ಸುವರ್ಣ ಶವ ಪತ್ತೆಯಾಗಿದೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದ ಅಶೋಕ್ ಸುವರ್ಣ, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದರು ಎನ್ನಲಾಗಿದೆ.
PublicNext
14/08/2022 03:22 pm