ಕುಂದಾಪುರ: ವಿದೇಶಿ ವ್ಯಕ್ತಿಯಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್‌ನ ಕ್ಯಾಶ್ ಡ್ರಾವರ್‌ನಿಂದ 52 ಸಾವಿರ ರೂಪಾಯಿ ಕಳವು ಮಾಡಿದ ಘಟನೆ ನಡೆದು ಒಂದೂವರೆ ತಿಂಗಳ ಬಳಿಕ ಎಫ್‌ಐಆರ್ ದಾಖಲಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ತ್ರಾಸಿ ಶ್ರೀ ಸೌಪರ್ಣಿಕಾ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ತ್ರಾಸಿ ನಿವಾಸಿ ಮನೋಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂನ್ 19ರಂದು ಸಂಜೆ 4:40ರ ಸುಮಾರಿಗೆ ಹೋಂಡಾ ಅಮೇಜ್ ಸಿಲ್ವರ್ ಕಲರ್ ಕಾರಿನಲ್ಲಿ ವಿದೇಶಿ ಪ್ರಜೆಯಂತೆ ಕಾಣುವ ಓರ್ವ ಅಪರಿಚಿತ ವ್ಯಕ್ತಿ ಪೆಟ್ರೋಲ್ ಬಂಕ್‌ಗೆ ಬಂದು 500 ರೂಪಾಯಿ ಡೀಸೆಲ್ ಹಾಕಿಸಿಕೊಂಡಿದ್ದಾನೆ. ಬಳಿಕ ಹಣವನ್ನು ಡೀಸೆಲ್ ಹಾಕಿದ ಸಿಬ್ಬಂದಿಗೆ ಕೊಟ್ಟು ಪೆಟ್ರೋಲ್ ಬಂಕ್‌ನ ಕ್ಯಾಶ್ ಕೌಂಟರ್ ಬಳಿ ಬಂದು ಮನೋಜ್ ಜೊತೆಗೆ ಇಂಗ್ಲಿಷ್‌ನಲ್ಲಿ ಮಾತನಾಡಿ 2,000 ರೂ. ನೋಟು ಕೇಳಿದ್ದಾನೆ. ಈ ವೇಳೆ ಮನೋಜ್ ಅವರ ಗಮನ ಬೇರೆಡೆಗೆ ಸೆಳೆದು ಕ್ಯಾಶ್ ಕೌಂಟರ್ ಡ್ರಾವರ್‌ನಲ್ಲಿದ್ದ 52 ಸಾವಿರ ರೂಪಾಯಿಗಳನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.
Kshetra Samachara
12/08/2022 06:31 pm