ಬೈಂದೂರು: ನೀರಿನ ರಭಸಕ್ಕೆ ಬಾಲಕಿಯೊಬ್ಬಳು ಕೊಚ್ಚಿ ಹೋದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿ ಎಂಬಲ್ಲಿ ಸಂಭವಿಸಿದೆ.
ಸನ್ನಿಧಿ (7) ನೀರುಪಾಲಾದ ಬಾಲಕಿಯಾಗಿದ್ದಾಳೆ. ಸನ್ನಿಧಿ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಳು. ಇವತ್ತು ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಸದ್ಯ ಬಾಲಕಿಗಾಗಿ ಊರವರು ಹುಡುಕಾಟ ನಡೆಸುತ್ತಿದ್ದಾರೆ.ಸ್ಥಳದಲ್ಲಿ ಊರವರು ಜಮಾಯಿಸಿದ್ದು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
PublicNext
08/08/2022 06:39 pm