ಪಡುಬಿದ್ರಿ: ಪರವಾನಗಿ ರಹಿತವಾಗಿ ಆಟೋದಲ್ಲಿ ಮಾರಾಕಾಸ್ತ್ರ ಇಟ್ಟುಕೊಂಡು ಸುಲಿಗೆಗೆ ಸಂಚು ರೂಪಿಸಿದ್ದ ಬಜ್ಪೆ ಕಾಳಾವರ ನಿವಾಸಿ ಮಹಮ್ಮದ್ ಮುನೀರ್ (24), ಮಹಮ್ಮದ್ ಆರೀಫ್ ಮುನ್ನ (37) ಹಾಗೂ ಅಕ್ಟರ್ (36) ಎಂಬುವರನ್ನು ಪೊಲೀಸರು ಗುರುವಾರ ಪಡುಬಿದ್ರಿಯಲ್ಲಿ ಬಂಧಿಸಿದ್ದಾರೆ.
ಪಡುಬಿದ್ರಿ ಠಾಣಿ ಅಪರಾಧ ವಿಭಾಗ ಎಸ್‌ಐ ಪ್ರಕಾಶ್ ಸಾಲ್ಯಾನ್ ಮತ್ತು ಸಿಬ್ಬಂದಿ ನಂದಿಕೂರು-ಮುದರಂಗಡಿ, ಕ್ರಾಸ್ ಬಳಿ ಗುರುವಾರ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರ್ಕಳದಿಂದ ಬಂದ ಆಟೋವನ್ನು ನಿಲ್ಲಿಸುವಂತೆ ಸೂಚಿಸಿದರೂ, ಚಾಲಕ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ. ಬೆನ್ನಟ್ಟಿದ ಪೊಲೀಸರು ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ದ್ವಾರದ ಬಳಿತಡೆದು ನಿಲ್ಲಿಸಿದಾಗ, ಚಾಲಕ ಮತ್ತು ಇಬ್ಬರು ಜಿಗಿದು ಓಡಿ ಹೋಗಲು ಅವರನ್ನು ಯತ್ನಿಸಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.
Kshetra Samachara
05/08/2022 10:53 am