ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿ.ನಗರ ಮುಳ್ಳುಗುಡ್ಡೆ ಎಂಬಲ್ಲಿ ತನ್ನನ್ನು ಯಾರೋ ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ ಎಂದು ವದಂತಿ ಹಬ್ಬಿಸಿದ್ದ ಉಚ್ಚಿಲ ನಿವಾಸಿ ಕಿಶೋರ್(49) ವಿರುದ್ಧ ಉಳ್ಳಾಲ ಠಾಣೆಯಲ್ಲಿ 107 ಪ್ರಕರಣ ದಾಖಲಾಗಿದೆ.
ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಆತನ ವಿರುದ್ಧ ದೂರು ದಾಖಲಾಗಿದೆ.ಬುಧವಾರ ವದಂತಿ ಹಬ್ಬಿಸಿದ ವೇಳೆ ಉಳ್ಳಾಲ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಸಂದರ್ಭ ಆರೋಪಿ ಕಿಶೋರ್ ಅಂತಹ ಯಾವುದೇ ಘಟನೆ ನಡೆದಿಲ್ಲ. ತಾನು ಸುಮ್ಮನೆ ಹೇಳಿರುವುದಾಗಿ ತಿಳಿಸಿದ್ದ. ಪೊಲೀಸರು ಈ ಬಗ್ಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕೈಬಿಟ್ಟಿದ್ದರು. ಇದೀಗ ಮುಂಜಾಗೃತಾ ಕ್ರಮವಾಗಿ ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
Kshetra Samachara
04/08/2022 08:25 pm