ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಫೇಸ್ ಬುಕ್ ನಲ್ಲಿ ಪ್ರಚೋದನಕಾರಿ ಬರಹ: ವ್ಯಕ್ತಿಯ ವಿರುದ್ಧ ದೂರು ದಾಖಲು

ಬೈಂದೂರು: ಪ್ರವೀಣ್ ನೆಟ್ಟಾರು ಮತ್ತು ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೈಂದೂರಿನ ವ್ಯಕ್ತಿಯೊಬ್ಬನ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷ್ಮೀಕಾಂತ ,ತನ್ನ ಫೇಸ್ ಬುಕ್ ಖಾತೆಯಲ್ಲಿ ಮಂಗಳೂರಿನಲ್ಲಿ ಕೊಲೆಯಾಗಿ ಮೃತಪಟ್ಟಿರುವ ಪ್ರವೀಣ್ ಎಂಬಾತನ ಫೋಟೋವನ್ನು ಬಳಸಿ ಒಂದು ಕೊಲೆಗೆ ಪ್ರತೀಕಾರ ಹೇಗಿತ್ತು ಎಂಬುದಾಗಿ ಪ್ರಚೋದನಾಕಾರಿ  ಬರಹವನ್ನು ಬರೆದು ಪೋಸ್ಟ್ ಮಾಡಿದ್ದ. ಹಾಗೂ ದಿನಪತ್ರಿಕೆಯಲ್ಲಿ ಬಂದಿರುವ ಮಂಗಳೂರಿನಲ್ಲಿ ನಡೆದ ಫಾಝಿಲ್  ಹತ್ಯೆಯ ಆರೋಪಿಗಳ ಫೋಟೋವನ್ನು ಬಳಸಿ, “ ಇವತ್ತಿನ ಹೀರೋಗಳು ” ಎಂಬ ಬರಹವನ್ನು ಬರೆದು ಪೋಸ್ಟ್ ಮಾಡಿದ್ದು, ಈ ರೀತಿಯಾಗಿ ಸುಳ್ಳು, ಪ್ರಚೋದನಾಕಾರಿ ಹಾಗೂ ಕೋಮು ಪ್ರಚೋದನೆ ಪೋಸ್ಟ್ ನ್ನು ಹರಿಯಬಿಟ್ಟಿರುವುದು ಕಂಡುಬಂದಿದ್ದು ಈತನ ವಿರುದ್ದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

04/08/2022 11:37 am

Cinque Terre

6.92 K

Cinque Terre

1

ಸಂಬಂಧಿತ ಸುದ್ದಿ