ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೂರೂ ಹತ್ಯೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿ; ಮುಸ್ಲಿಂ ಸೆಂಟ್ರಲ್ ಕಮಿಟಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಡೆದಿರುವ ಸರಣಿ ಹತ್ಯೆಯ ವಿಚಾರದಲ್ಲಿ ಸರಕಾರ ತಾರತಮ್ಯ ಮಾಡುವುದು ಬೇಡ. ಮೂರೂ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿ ಕೊಲೆ ಕೃತ್ಯ ನಡೆಸಿದ ನೈಜ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲಿ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಆಗ್ರಹಿಸಿದೆ.

ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ರಾಜ್ಯ ಉಪಾಧ್ಯಕ್ಷ ಮುಮ್ತಾಜ್ ಅಲಿ ಮಾತನಾಡಿ, ಅಹಿತಕರ ಘಟನೆ ವಿಚಾರವಾಗಿ ದ.ಕ. ಜಿಲ್ಲೆಗೆ ಆಗಮಿಸಿರುವ ಸಿಎಂ ಬಸವರಾಜ ಬೊಮ್ಮಾಯಿಯವರು, ಪ್ರವೀಣ್ ನೆಟ್ಟಾರು ಮನೆಗೆ ಹೋಗಿ ಪರಿಹಾರ ನೀಡಿದ್ದಾರೆ‌. ಆದರೆ, ಕೊಲೆಯಾದ ಮಸೂದ್ ಹಾಗೂ ಫಾಝಿಲ್ ಮನೆಗೆ ಭೇಟಿ ನೀಡದೆ ಪರಿಹಾರವನ್ನೂ ಕೊಡದೆ ತಾರತಮ್ಯ ಎಸಗಿರುವುದು ಖಂಡನೀಯ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ನಡೆದ ಶಾಂತಿಸಭೆಗೆ ಮುಸ್ಲಿಂ ಸಮುದಾಯ ಗೈರು ಹಾಜರಾಗಿತ್ತು ಎಂದರು.

ಇಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮುಸ್ಲಿಂ ಸಮುದಾಯ ಶಾಂತಿಸಭೆಗೆ ಗೈರುಹಾಜರಾಗದ ಬಗ್ಗೆ ವಿವರ ನೀಡಿದ್ದೇವೆ‌. ಆದರೆ, ಇಂದು ಜಿಲ್ಲಾಧಿಕಾರಿಯವರು ನಮಗೆ ಕೆಲವೊಂದು ಆಶ್ವಾಸನೆಗಳನ್ನು ನೀಡಿದ್ದಾರೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ನಡೆಯುವ ಸರಣಿ ಶಾಂತಿಸಭೆಗೆ ಮುಸ್ಲಿಂ ಸಮುದಾಯದ ಉಪಸ್ಥಿತಿ ಇರುತ್ತದೆ ಎಂದು ಹೇಳಿದರು.

ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕೆ.ಇ. ಮಾತನಾಡಿ, ಫಾಝಿಲ್ ಹಾಗೂ ಮಸೂದ್ ಹತ್ಯೆಯನ್ನು ಕೇವಲವಾಗಿ ನೋಡಿ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಮಾತ್ರ ಎನ್ಐಎಗೆ ಒಪ್ಪಿಸಿರುವುದು ರಾಜ್ಯ ಸರಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ. ತಕ್ಷಣ ಸರಕಾರ ಮೂರೂ ಹತ್ಯೆಗಳನ್ನು ಎನ್ಐಎ ಒಂದೇ ತನಿಖಾ ಸಂಸ್ಥೆಯಡಿ ತನಿಖೆ ಮಾಡಿಸಿ ನೈಜ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಲಿ ಎಂದು ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

01/08/2022 08:39 pm

Cinque Terre

13.66 K

Cinque Terre

0

ಸಂಬಂಧಿತ ಸುದ್ದಿ