ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯತ್ನ ಸದಸ್ಯರೋರ್ವರ ತಂದೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ನಿನ್ನೆ ಸಂಜೆ ನಡೆದಿದೆ.
ಮಾಡೂರು ಕೊರಗಜ್ಜನ ಕಟ್ಟೆ ಬಳಿ ನಿವಾಸಿ ಕೋಟೆಕಾರು ಪಟ್ಟಣ ಪಂಚಾಯತ್ನ ನಾಲ್ಕನೇ ವಾರ್ಡ್ ನ ಸದಸ್ಯ ಕಿರಣ್ ಎಂಬವರ ತಂದೆ ಕೃಷ್ಣ ನಾಯ್ಕ್(59) ಆತ್ಮಹತ್ಯೆಗೈದ ದುರ್ದೈವಿ.ನಿನ್ನೆ ಸಂಜೆ ಮನೆ ಮಂದಿ ಇಲ್ಲದ ವೇಳೆ ಮನೆಗೆ ತಾಗಿಕೊಂಡಿರುವ ಶೆಡ್ ಒಳಗಿನ ಮರದ ಪಕ್ಕಾಸಿಗೆ ಅವರು ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.
ಕೃಷ್ಣ ನಾಯ್ಕ್ ಅವರು ದೀರ್ಘ ಕಾಲದಿಂದ ಕಾಲು ನೋವಿನಿಂದ ಬಳಲುತ್ತಿದ್ದರೆನ್ನಲಾಗಿದೆ.ಸಹಿಸದ ಕಾಲು ನೋವಿನಿಂದಲೇ ಖಿನ್ನರಾಗಿದ್ದ ಅವರು ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ಕೃಷ್ಣ ನಾಯ್ಕ್ ಅವರ ಪತ್ನಿ ಜಯಂತಿ ಅವರೂ ಕೋಟೆಕಾರು ಪಂಚಾಯತ್ನ ಮಾಜಿ ಸದಸ್ಯೆಯಾಗಿದ್ದು ಮೃತರು
ಪತ್ನಿ, ಮೂವರು ಪುತ್ರರನ್ನ ಅಗಲಿದ್ದಾರೆ.
Kshetra Samachara
01/08/2022 02:41 pm