ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ನಂದಿನಿ ನದಿಯಲ್ಲಿ ಮಳೆಗಾಲದಲ್ಲಿ ಅಕ್ರಮ ಮರಳು ದಂಧೆ.!

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ಬಲವಿನ ಗುಡ್ಡೆ ನಂದಿನಿ ನದಿಯಲ್ಲಿ ರಾತ್ರೋರಾತ್ರಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ಧಂದೆ ನಡೆಯುತ್ತಿದ್ದು ಕೂಡಲೇ ನಿಲ್ಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕಟೀಲು ಸಂಜೀವ ಮಡಿವಾಳ ಆಗ್ರಹಿಸಿದ್ದಾರೆ

ಕಿನ್ನಿಗೋಳಿ ಸಮೀಪದ ಬಲವಿನ ಗುಡ್ಡೆ ಬಳಿಯ ನಂದಿನಿ ನದಿಯಲ್ಲಿ ಡಜ್ಜಿಂಗ್ ಯಂತ್ರದ ಮೂಲಕ ಮರಳು ಸಾಗಣಿಕೆಯು ಮಧ್ಯೆರಾತ್ರಿ 50 ಕಿಂತಲೂ ಹೆಚ್ಚು ಲಾರಿಗಳ ಮೂಲಕ ಎಗ್ಗಿಲ್ಲದೆ ಪ್ರತಿದಿನ ನಡೆಯುತ್ತಿದೆ.

ಅಕ್ರಮ ಮರಳು ಸಾಗಾಟ ಸ್ಥಳೀಯ ಮುಲ್ಕಿ ತಾಲೂಕು ಕಂದಾಯ ಇಲಾಖೆಯ ಆಡಳಿತಕ್ಕೆ ಗೊತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಯಾಕೆ? ಎಂದು ಪ್ರಶ್ನಿಸಿರುವ ಅವರು ಈ ಬಗ್ಗೆ ವಿಚಾರಿಸಿ ಮಾಡಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/07/2022 11:30 am

Cinque Terre

14 K

Cinque Terre

0

ಸಂಬಂಧಿತ ಸುದ್ದಿ