ಕಾರ್ಕಳ: ಫೇಸ್‌ಬುಕ್ ಪ್ರೇಮಪಾಶಕ್ಕೆ ಸಿಲುಕಿ ಯುವಕನನ್ನು ಮದುವೆಯಾಗಿದ್ದ ಯುವತಿ ಇದೀಗ ನಾಲ್ಕೂವರೆ ವರ್ಷ ಆಗುವಾಗಲೇ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಪ್ರಸಂಗ ನಡೆದಿರುವುದು ಕಾರ್ಕಳ ತಾಲೂಕು ವ್ಯಾಪ್ರಿಯಲ್ಲಿ. ಇದೀಗ ನೊಂದ ಮಹಿಳೆ ಕಾರ್ಕಳ ಠಾಣೆ ಮೆಟ್ಟಿಲೇರಿದ್ದು, ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
ನಾಲ್ಕೂವರೆ ವರ್ಷಗಳ ಹಿಂದೆ ಮದುವೆ..
ತಾಲೂಕಿನ ಬೈಲೂರು ನಿವಾಸಿ ಸೌಮ್ಯಾ ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಕಾಸರಗೋಡು ನಿವಾಸಿ ಸುನಿಲ್ ಟಿ. ಅವರೊಂದಿಗೆ ಮದುವೆಯಾಗಿದ್ದರು. ಕಾರ್ಕಳ ದೇವಸ್ಥಾನವೊಂದರಲ್ಲಿ ಇವರಿಬ್ಬರ ಮದುವೆ ಆಗಿತ್ತು. ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.ನಂತರ
ಸುನಿಲ್ ತನ್ನ ಅಸಲಿ ಬುದ್ದಿ ತೋರಿಸತೊಡಗಿದ.ಪತ್ನಿ ಸೌಮ್ಯಾರನ್ನು ಹಣಕ್ಕಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡತೊಡಗಿದ. 5 ಲಕ್ಷ ರೂ. ವರದಕ್ಷಿಣೆ ಹಣ ಕೊಡಬೇಕೆಂದು ಒತ್ತಾಯಿಸತೊಡಗಿದ. ಪತ್ನಿ ಬಂಗಾರ ಅಡವಿಟ್ಟು 80 ಸಾವಿರ ರೂ. ಹಣವನ್ನು ನೀಡಿದ್ದರು.
ಮದುವೆಯ ಬಳಿಕ ಸೌಮ್ಯಾ ಅವರನ್ನು ತಾಯಿ ಮನೆಯಲ್ಲಿಯೇ ಬಿಟ್ಟಿದ್ದ ಸುನಿಲ್, ಊರಿಗೆ ಹೋದಾಗಲೆಲ್ಲ ಫೋನ್ ಮಾಡಿದರೂ ಫೋನ್ ಮಾಡದಂತೆ ಬೈಯುತ್ತಿದ್ದ. ಇದರಿಂದ ಬೇಸತ್ತಿದ್ದ ಸೌಮ್ಯಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಸೌಮ್ಯಾ ಅವರ ಸಹೋದರರು ಸುನಿಲ್‌ಗೆ ಕರೆ ಮಾಡಿ ತಿಳಿಸಿದಾಗ ಅವಳು ಸಾಯಲಿ, ನಾನು ಬರುವುದಿಲ್ಲ ಎಂದು ಹೇಳಿದ್ದ.
ಕೊನೆಗೆ ಬೇರೆ ದಾರಿ ಕಾಣದೆ ಸೌಮ್ಯಾ, ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ. ನನಗೆ15 ದಿನಗಳ ಕಾಲಾವಕಾಶ ಕೊಡಿ. ಒಳ್ಳೆಯ ರೀತಿಯಿಂದ ನೋಡಿಕೊಳ್ಳುತ್ತೇನೆಂದು ಮೊದಲು ಹೇಳಿದ್ದ ಸುನಿಲ್‌ಗೆ ಫೋನ್ ಮಾಡಿದಾಗ ಇನ್ನೂ 5 ಲಕ್ಷ ರೂ. ವರದಕ್ಷಿಣೆ ಕೊಡು ಎಂದು ಜೀವ ಬೆದರಿಕೆ ಹಾಕಿದ್ದಾನೆ. ಇದೀಗ ಕಾರ್ಕಳ ಠಾಣೆಗೆ ದೂರು ನೀಡಿರುವ ಪತ್ನಿ ನ್ಯಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
Kshetra Samachara
23/07/2022 02:34 pm