ವಿಟ್ಲ: ಬೆಳ್ಳಂಬೆಳಗ್ಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದು ಪರ ಸಂಘಟನೆಯ ಕಾರ್ಯಕರ್ತರು ತಡೆದು ನಿಲ್ಲಿಸಿದ ಘಟನೆ ವಿಟ್ಲದ ಕೋಡಂದೂರು ರಸ್ತೆಯಲ್ಲಿ ಜು.22 ರಂದು ಬೆಳಗ್ಗೆ ನಡೆದಿದೆ.
ವಾಹನ ತಡೆಯುತ್ತಿದ್ದಂತೆ ಆರೋಪಿಗಳು ಕಾರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಕಾರಿನ ಗಾಜನ್ನು ಒಡೆದು ಶೋಚನೀಯ ಸ್ಥಿತಿಯಲ್ಲಿ ಇದ್ದ ದನಗಳನ್ನು ಹಿಂದು ಸಂಘಟನೆಯ ಕಾರ್ಯಕರ್ತರು ರಕ್ಷಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಠಾಣೆಯ ಪೊಲೀಸರು ಬೇಟಿ ನೀಡಿ ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Kshetra Samachara
22/07/2022 09:58 am