ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಅಪಘಾತದಲ್ಲಿ ಮೃತಪಟ್ಟ ಯುವಕನ ಗುರುತು ಪತ್ತೆ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಬಳಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರನನ್ನು ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ನಿವಾಸಿ ಅಕ್ಷಯ್ ಕೆ ಆರ್ ಎಂದು ಗುರುತಿಸಲಾಗಿದೆ.

ಮೃತ ಅಕ್ಷಯ್ ಪುರೋಹಿತ ವೃತ್ತಿ ಮಾಡುತ್ತಿದ್ದು ಮಂಗಳೂರಿನಿಂದ ತನ್ನ ಮನೆಯಾದ ಉಡುಪಿ ಜಿಲ್ಲೆಯ ಕಟಪಾಡಿಗೆ ಹೋಗುತ್ತಿದ್ದಾಗ ಸುರತ್ಕಲ್ ಗೋವಿಂದ ದಾಸ ಕಾಲೇಜು ಬಳಿ ಹೆದ್ದಾರಿ ಜಂಕ್ಷನ್ ಬಳಿ ಲಾರಿ ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.

ಅಪಘಾತ ರಭಸಕ್ಕೆ ಯುವಕನ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ.

Edited By :
Kshetra Samachara

Kshetra Samachara

21/07/2022 10:13 pm

Cinque Terre

16.85 K

Cinque Terre

0

ಸಂಬಂಧಿತ ಸುದ್ದಿ