ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗೂಂಡಾ ಕಾಯ್ದೆ ಜಾರಿಯಾದ ಆರೋಪಿಗಳಿಬ್ಬರು ಬಳ್ಳಾರಿ ಜೈಲಿಗೆ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ಪಡಿಸುತ್ತಿದ್ದ ಗೂಂಡಾ ಕಾಯ್ದೆ ಜಾರಿಯಾಗಿರುವ ಆರೋಪಿಗಳಿಬ್ಬರನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗಿದೆ.

ನಗರದ ಎಕ್ಕೂರು ನಿವಾಸಿ ಧೀರಜ್ ಕುಮಾರ್(27), ಬಜಾಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಗೂಂಡಾ ಕಾಯ್ದೆ ಜಾರಿಗೊಂಡ ಆರೋಪಿಗಳು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಹಾಗೂ ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಧೀರಜ್ ಮೇಲೆ 9 ಹಾಗೂ ಪ್ರೀತಂ ಮೇಲೆ 12 ಪ್ರಕರಣಗಳು ದಾಖಲಾಗಿವೆ.

ಅವರಿಬ್ಬರೂ ಜೊತೆಯಾಗಿ ಎಸಗಿರುವ ಪ್ರಕರಣಗಳು ಹಲವಾರು ಇವೆ. ಈ ಇಬ್ಬರೂ ತಂಡಗಳನ್ನು ರಚಿಸಿದ್ದು, ಈ ತಂಡಗಳಲ್ಲಿ 66 ಮಂದಿಯನ್ನು ಗುರುತಿಸಲಾಗಿದೆ. ಈ ಆರೋಪಿಗಳು ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಕುಕೃತ್ಯದಲ್ಲಿ ತೊಡಗಿದ್ದರು. ಕೊಲೆ ಯತ್ನ, ಸುಲಿಗೆ, ದರೋಡೆ ಯತ್ನ, ಹಲ್ಲೆ, ಒಳಸಂಚು ಪ್ರಕರಣಗಳಲ್ಲಿ ಸಕ್ರಿಯರಾಗಿದ್ದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಈ ಇಬ್ಬರನ್ನು ಗೂಂಡಾ ಕಾಯ್ದೆಯನ್ವಯ ಗರಿಷ್ಠ ಅವಧಿಗೆ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಸದ್ಯ ಇವರಿಬ್ಬರೂ ಮಂಗಳೂರು ಕಾರಾಗೃಹದಲ್ಲಿ ಬಂಧಿಯಾಗಿದ್ದು, ಅಲ್ಲಿಂದಲೇ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗಿದೆ ಎಂದರು.

Edited By : Shivu K
Kshetra Samachara

Kshetra Samachara

20/07/2022 07:46 pm

Cinque Terre

10.4 K

Cinque Terre

1

ಸಂಬಂಧಿತ ಸುದ್ದಿ