ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದೆ.
ನಗರದ ಎಕ್ಕೂರು ನಿವಾಸಿ ಧೀರಜ್ ಕುಮಾರ್(27), ಬಜಾಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಗೂಂಡಾ ಕಾಯ್ದೆ ಜಾರಿಗೊಂಡ ಆರೋಪಿಗಳು. ಆರೋಪಿಗಳಿಬ್ಬರೂ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯದಲ್ಲಿ ಪದೇ ಪದೇ ತೊಡಗಿಕೊಂಡಿರುತ್ತಾರೆ. ಇವರುಗಳು ಕೊಲೆಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಪದೇ ಪದೇ ನಡೆಸುತ್ತಿದ್ದ ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯದಲ್ಲಿ ತೊಡುಗುತ್ತಿರುವುದರಿಂದ ಸಾಮಾನ್ಯ ಕಾನೂನುಗಳಿಂದ ಇವರ ಅಪರಾಧ ಕೃತ್ಯಗಳಿಗೆ ನಿಯಂತ್ರಣ ಹೇರುವುದು ಕಷ್ಟಕರವಾಗಿದೆ.
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಇಬ್ಬರೂ ಆರೋಪಿಗಳನ್ನು ಗೂಂಡಾ ಕಾಯ್ದೆಯನ್ವಯ ಗರಿಷ್ಠ ಅವಧಿಗೆ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಸದ್ಯ ಇವರಿಬ್ಬರೂ ಮಂಗಳೂರು ಕಾರಾಗೃಹದಲ್ಲಿ ಬಂಧಿಗಳಾಗಿದ್ದಾರೆ.
Kshetra Samachara
20/07/2022 09:27 am