ಮುಲ್ಕಿ: ಸರ್ಫಿಂಗ್ ಖ್ಯಾತಿಯ ಹಳೆಯಂಗಡಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್ ಸಮುದ್ರ ಕಿನಾರೆಯಲ್ಲಿ ವ್ಯಕ್ತಿಯೊಬ್ಬನ ಶವಪತ್ತೆಯಾಗಿದೆ. ವ್ಯಕ್ತಿಯ ಪ್ಯಾಂಟ್ ಕಿಸೆಯಲ್ಲಿ ಗುರುತು ಚೀಟಿ ಪತ್ತೆಯಾಗಿದ್ದು ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬಳಿಯ ನಿವಾಸಿ ಅಶೋಕ್ ವರ್ಧನ್(50) ಎಂದು ಗುರುತಿಸಲಾಗಿದೆ.
ಕಡಲ ಕಿನಾರೆಯಲ್ಲಿ ಸಂಜೆ ಹೊತ್ತಿಗೆ ಅಶೋಕ್ ವರ್ಧನ್ ಶವ ಪತ್ತೆಯಾಗಿದ್ದು ಸ್ಥಳೀಯ ಮೀನುಗಾರರು ಗಮನಿಸಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ವ್ಯಕ್ತಿ ಯಾಕಾಗಿ ಸಸಿಹಿತ್ಲು ಬೀಚ್ ಬಳಿ ಬಂದಿದ್ದ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ
ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Kshetra Samachara
15/07/2022 07:03 pm