ವಿಟ್ಲ: ವೈದ್ಯನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಮಾಣಿ ಮೂಲದ ಅನುಷ್ ನಾಯಕ್ ಎಂಬಾತ ಪ್ರಕರಣ ಆರೋಪಿ.
14 ವರ್ಷದ ಬಾಲಕಿ ಮೇಲೆ ವೈದ್ಯ ಅನುಷ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಅನುಷ್‌ಗೆ ಎರಡು ಮದುವೆಯಾಗಿದ್ದು ಮೊದಲ ಪತ್ನಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆಯ ತಂದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 06-03-2021 ರಂದು ಮಾಣಿ ಗ್ರಾಮದ ಮಾಣಿ ಸರಕಾರಿ ಆಸ್ಪತ್ರೆಯ ಬಳಿಯಲ್ಲಿ ಕಾಣ ಸಿಕ್ಕಿದ ಆರೋಪಿ ಡಾ.ಅನುಷ ನಾಯ್ಕ ಸಂತ್ರಸ್ತೆಯನ್ನು ಪ್ರೀತಿ ಮಾಡುವಂತೆ ತಿಳಿಸಿದಂತೆ ಒಪ್ಪಿಕೊಂಡಿದೆ. ಅದರಂತೆ ಸ್ವಲ್ಪ ಸಮಯದ ನಂತರ, ಆರೋಪಿಯು ಆತನ ಕಾರಿನಲ್ಲಿ ಸಂತ್ರಸ್ತೆಯನ್ನು ಮಾಣಿ ಗ್ರಾಮದ ಮನೆಯ ಕಡೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೈಯನ್ನು ಮುಟ್ಟಿ ಚುಂಬಿಸಿ ಲೈಂಗಿಕ ತೊಂದರೆ ನೀಡಿರುತ್ತಾರೆ.
ಆರೋಪಿಯು ಕಳೆದ ಮೇ ತಿಂಗಳಿನಲ್ಲಿ ಮದುವೆಯಾದ ವಿಚಾರ ತಿಳಿದುಕೊಂಡು ಬಾಲಕಿ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಿದ ಕೋಪದಿಂದ ನೀನು ಮಾತನಾಡದೆ ಇದ್ದರೆ ನಿನ್ನನ್ನು ಹಾಗೂ ನಿನ್ನ ತಂದೆ-ತಾಯಿಯನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ್ದು ಅದರಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ತನಿಖೆ ನಡೆಸಿದ ವಿಟ್ಲ ಪೊಲೀಸರು ವೆನ್ಲಾಕ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಡಾ. ಅನುಷ್ ನಾಯ್ ಎಂಬಾತನನ್ನು ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿಂದ ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಿದ್ದಾರೆ.
Kshetra Samachara
11/07/2022 05:57 pm