ಕುಂದಾಪುರ: ಆನಗಳ್ಳಿ ದತ್ತಾಶ್ರಮದಲ್ಲಿ ಕೆಲಸ ಮಾಡುವ ಯುವತಿಯ ವಿಚಾರವಾಗಿ ಇಬ್ಬರ ನಡುವೆ ಉಂಟಾದ ವೈಮನಸ್ಸಿನಿಂದ ಸಾಲ್‌ರೋಡ್ ಕಸಬಾ ಗ್ರಾಮ ಚಿಕ್ಕನಸಾಲು ರಸ್ತೆ ಗದ್ದೆಮನೆ ನಿವಾಸಿ ಗುರುರಾಜ್(25)ನನ್ನು ಆತನ ಸಂಬಂಧಿ ಸಂತೋಷ ಎಂಬಾತ ಚೂರಿಯಿಂದ ಇರಿದಿದ್ದಾನೆ.
ಆನಗಳ್ಳಿ ದತ್ತಾಶ್ರಯದಲ್ಲಿ ಗುರುರಾಜ್ ಹಾಗೂ ಸಂಬಂಧಿ ಸಂತೋಷ ಕೆಲಸ ಸಂತೋಷ 6 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದನು.ಅಲ್ಲಿ ಕೆಲಸ ಮಾಡುವ ಯುವತಿ ಜತೆ ಸಂತೋಷ ಸ್ನೇಹದಿಂದ ಇದ್ದು ಈ ವಿಚಾರದಲ್ಲಿ ಗುರುರಾಜ ಹಾಗೂ ಸಂತೋಷನಿಗೆ ವೈಮನಸ್ಸಿತ್ತು.ಈ ವಿಚಾರವಾಗಿ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು.
ಯುವತಿಗೆ ಸರಿಯಾಗಿ ಕೆಲಸ ನಿರ್ವಹಿಸಲು ಗುರುರಾಜ ತಿಳಿವಳಿಕೆ ನೀಡಿದ್ದಕ್ಕೆ ಸಂತೋಷ ಗುರುರಾಜನಿಗೆ ಪದೇಪದೇ ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕಿದ್ದ. ಗುರುವಾರ ಗುರುರಾಜ ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಸಂಗಮ್ ಜಂಕ್ಷನ್ ಬಳಿ ಕಾರನ್ನು ಅಡ್ಡಗಟ್ಟಿ ಸಂತೋಷ ಚೂರಿಯಿಂದ ಗುರುರಾಜನ ಹೊಟ್ಟೆ ಮತ್ತು ಕೈಗೆ ತಿವಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಗುರುರಾಜ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
09/07/2022 04:17 pm