ಮಂಗಳೂರು: ನಗರದ ಮರವೂರು ಸೇತುವೆ ಮೇಲೆ ಬೈಕ್ ಇರಿಸಿ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕದ್ರಿ ವ್ಯಾಸನಗರ ನಿವಾಸಿ ವಿವೇಕ್ ಪ್ರಭ್ರು ಎಂಬವರು ನಾಪತ್ತೆಯಾದ ವ್ಯಕ್ತಿ.
ವಿವೇಕ್ ಪ್ರಭು ಮಂಗಳವಾರ ರಾತ್ರಿ ಯಾವುದೋ ಕಾರಣಕ್ಕೆ ಮನೆಯವರೊಂದಿಗೆ ಮನಸ್ತಾಪ ಉಂಟಾಗಿ ಬೈಕ್ ನಲ್ಲಿ ಬಂದಿದ್ದರು. ಆದರೆ ಆ ಬಳಿಕ ಅವರು ಬೈಕ್ ಅನ್ನು ಮರವೂರು ಸೇತುವೆ ಬಳಿ ಇರಿಸಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
Kshetra Samachara
06/07/2022 10:16 pm