ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ : ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ ಮೃತ್ಯು

ಸುಳ್ಯ: ಮಹಿಳೆಯೋರ್ವರು ತನ್ನ ಮಗುವಿನೊಂದಿಗೆ ಬಾವಿಗೆ ಹಾರಿ ಮೃತಪಟ್ಟು, ಬಾಲಕಿ ಗಾಯಗೊಂಡಿರುವ ಘಟನೆ ದೇವಚಳ್ಳ ಗ್ರಾಮದ ತಳೂರಿನಲ್ಲಿ ನಡೆದಿದೆ.ಅಗ್ನಿಶಾಮಕ ದಳ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗೀತಾ ತನ್ನ 4 ವರ್ಷದ ಮಗಳು ಪೂರ್ವಿಕಾಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇಂದು ಮುಂಜಾನೆ ಮನೆಯವರು ಎದ್ದಾಗ ದಯಾನಂದ ಅವರ ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ಅರಿತು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡು ಬಂದಿದೆ. ಈ ವೇಳೆ ಮಗಳು ಬಾವಿಯೊಳಗೆ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

29/06/2022 07:41 pm

Cinque Terre

6.82 K

Cinque Terre

0

ಸಂಬಂಧಿತ ಸುದ್ದಿ