ಉಳ್ಳಾಲ: ಮನೆ ಮಂದಿ ವಾಸವಿಲ್ಲದ ಒಂಟಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಮನೆಯ ಬೀಗ ಮುರಿದು ನಗ,ನಗದು ಸಿಗದೆ ಹಾಲ್ ನಲ್ಲಿದ್ದ ಇನ್ವಾರ್ಟರನ್ನು ಕದ್ದೊಯ್ದ ಪ್ರಕರಣ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಮೋರ್ಲಹಿತ್ಲುವಿನಲ್ಲಿ ಭಾನುವಾರ ಬೆಳಕಿಗೆ ಬಂದಿದೆ.
ಮನೆಯ ಯಜಮಾನ ಶೇಖಬ್ಬ ಅವರ ಪುತ್ರರೆಲ್ಲರೂ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಸೊಸೆಯಂದಿರು ತವರು ಮನೆಯಲ್ಲಿದ್ದಾರೆ.ಶೇಖಬ್ಬ ಅವರು ತನ್ನ ಪತ್ನಿ ಸಾವನ್ನಪ್ಪಿದ ಬಳಿಕ ಸಜಿಪದ ಮನೆಯಲ್ಲಿ ವಾಸಿಸುತ್ತಿದ್ದು ಮೋರ್ಲಹಿತ್ಲುವಿನ ಮನೆಗೆ ವಾರಕ್ಕೊಮ್ಮೆ ಬಂದು ತೆರಳುತ್ತಿದ್ದರು.
ಭಾನುವಾರ ಸಂಜೆ ಶೇಖಬ್ಬ ಅವರು ಬಂದಾಗ ಮನೆಯ ಬಾಗಿಲಿನ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ.ಕಳ್ಳರು ಮನೆಯನ್ನು ತಡಕಾಡಿದ್ದು,ಸುಮಾರು 23ಸಾವಿರ ರೂ. ಮೌಲ್ಯದ ಇನ್ವಾರ್ಟರನ್ನು ಹೊತ್ತೊಯ್ದಿದ್ದಾರೆ. ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
27/06/2022 01:22 pm