ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ- ಆರೋಪಿ ಬಂಧನ

ಕುಂದಾಪುರ : ಹಳ್ಳಿಹೊಳೆ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ಉಪ್ಪುಂದದ ಶ್ರೀಧರ ಮಡಿವಾಳ (38) ಬಂಧಿತ ಆರೋಪಿ. ಈತ ಜೂನ್ 18ರಂದು ರಾತ್ರಿ ಕಮಲಶಿಲೆ ಗ್ರಾಮದ ಹಳ್ಳಿಹೊಳೆ ಎಂಬಲ್ಲಿ ರಾಘವೇಂದ್ರ ಯಡಿಯಾಳ ಎಂಬವರ ಮನೆಯ ಕೋಣೆಯಲ್ಲಿ ಇರಿಸಿದ ಸುಮಾರು 1,30,000 ರೂ. ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ ಮತ್ತು 1,50,000 ರೂ. ಬೆಲೆ ಬಾಳುವ ಮಲ್ಲಿಗೆ ಮೊಗ್ಗಿನ 30 ಗ್ರಾಂ ಚಿನ್ನದ ಸರ -1, ಸುಮಾರು 20,000 ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ, 5 ಸಾವಿರ ನಗದು ಹಣ ಕಳವು ಮಾಡಿದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಶಂಕರನಾರಾಯಣ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ 2 ಚಿನ್ನದ ಬಳೆಗಳು, 1 ಮಲ್ಲಿಗೆ ಮೊಗ್ಗಿನ ಚಿನ್ನದ ಸರ ಹಾಗೂ ಒಂದು ಚಿನ್ನದ ಉಂಗುರ ಸೇರಿ ಒಟ್ಟು 3 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

21/06/2022 01:34 pm

Cinque Terre

4.84 K

Cinque Terre

0

ಸಂಬಂಧಿತ ಸುದ್ದಿ