ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೌಡಿಶೀಟರ್ ನನ್ನು ಹತ್ಯೆ ಮಾಡಿದ ಆರೋಪಿ ಅಂದರ್!

ಮಂಗಳೂರು: ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರನ ಹತ್ಯೆಯ ಪ್ರಮುಖ ಆರೋಪಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.ನಗರದ ಬೈಕಂಪಾಡಿಯ ಮೀನಕಳಿಯ ನಿವಾಸಿ ರೌಡಿಶೀಟರ್ ನವೀನ್ ಅಲಿಯಾಸ್ ಮೈಕಲ್ ನವೀನ್ ಬಂಧಿತ ಆರೋಪಿ.

ನಗರದ ಬೈಕಂಪಾಡಿಯ ಮೀನಕಳಿಯ ರಸ್ತೆ ಬದಿಯಲ್ಲಿ ಜೂನ್ 6ರಂದು ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರನನ್ನು ಮಾರಕಾಯುಧಗಳಿಂದ ದಾಳಿ‌ನಡೆಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕೊಲೆಗೆ ಸಂಚು ರೂಪಿಸಿದ್ದ, ಕೊಲೆ ಪ್ರಕರಣದ ರೂವಾರಿ, ಪ್ರಮುಖ ಆರೋಪಿ ನವೀನ್ ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನ ಮೇಲೆ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

15/06/2022 09:57 pm

Cinque Terre

6.1 K

Cinque Terre

0

ಸಂಬಂಧಿತ ಸುದ್ದಿ