ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಒಳ ಉಡುಪು-ಸ್ಯಾನಿಟರಿ ಪ್ಯಾಡ್ ನೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ 1.684 ಕೆಜಿ ಚಿನ್ನ ಸೀಝ್

ಮಂಗಳೂರು: ನಗರದ ಮಂಗಳೂರು ಇಂಟರ್ ನ್ಯಾಷನಲ್ ಏರ್ಪೋಟ್ ನಲ್ಲಿ ಭಾರೀ ಮೊತ್ತದ ಚಿನ್ನವನ್ನು ಸ್ಯಾನಿಟರಿ ಪ್ಯಾಡ್ ಹಾಗೂ ಒಳ ಉಡುಪಿನೊಳಗೆ ಬಿಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳನ್ನು ಕಸ್ಟಮ್ಸ್ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ‌. ಈಕೆಯಿಂದ ಬರೋಬ್ಬರಿ 1.684 ಕೆಜಿ ತೂಕದ 24 ಕ್ಯಾರೆಟ್ ನ 86,89,440 ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ದುಬೈನಿಂದ ಜೂನ್ 14ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈ ಖತರ್ನಾಕ್ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ‌‌. ಆಗ ಈಕೆ ಒಳ ಉಡುಪು ಹಾಗೂ ಸ್ಯಾನಿಟರಿ ಪ್ಯಾಡ್ ನಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಮಹಿಳೆ ಒಳ ಉಡುಪಿನೊಳಗೆ ಆಯತಾಕೃತಿಯ ಚಿನ್ನವನ್ನು ಗಟ್ಟಿಯ ರೂಪದಲ್ಲಿ ಹಾಗೂ ಕಂದು ಬಣ್ಣದ ಪುಡಿಯೊಳಗೆ ಚಿನ್ನವನ್ನು ಮೂರು ಪ್ಲಾಸ್ಟಿಕ್ ಕವರ್ ಒಳಗಡೆ ಮರೆಮಾಡಿ ಸ್ಯಾನಿಟರಿ ಪ್ಯಾಡ್ ಒಳಗಡೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದಳು. ತಕ್ಷಣ ಚಿನ್ನ ಸಹಿತ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡ ಕಸ್ಟಮ್ಸ್ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

Edited By :
Kshetra Samachara

Kshetra Samachara

15/06/2022 11:47 am

Cinque Terre

9.44 K

Cinque Terre

0

ಸಂಬಂಧಿತ ಸುದ್ದಿ