ಮಂಗಳೂರು: ನಿಲ್ಲಿಸಿರುವ ಬಸ್ನಲ್ಲಿ ಬಸ್ ನಿರ್ವಾಹಕನ ಬ್ಯಾಗ್ನಿಂದ ಖದೀಮನೊಬ್ಬ ಹಣ ಕಳವು ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಉಪ್ಪಿನಂಗಡಿ - ಸ್ಟೇಟ್ಬ್ಯಾಂಕ್ ನಡುವೆ ಸಂಚರಿಸುವ ಈ ಖಾಸಗಿ ಬಸ್ನ್ನು ಸ್ಟೇಟ್ಬ್ಯಾಂಕ್ನಲ್ಲಿ ನಿಲ್ಲಿಸಲಾಗಿತ್ತು. ಆ ಬಳಿಕ ಬಸ್ನಿಂದ ಇಳಿದ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದಾರೆ. ಈ ಸಂದರ್ಭ ಬಸ್ನೊಳಗೆ ಪ್ರವೇಶಿಸಿರುವ ಖದೀಮನೋರ್ವ ಬಸ್ನಲ್ಲಿದ್ದ ಬ್ಯಾಗ್ ನೊಳಗಿದ್ದ ಹಣವನ್ನು ಎಗರಿಸಿದ್ದಾನೆ.
ಈ ವೇಳೆ ಬಸ್ನಲ್ಲಿ ಬೇರೆ ಯಾರೂ ಇರಲಿಲ್ಲ. ಕಳವು ಮಾಡಲಾಗಿದೆ ಎನ್ನಲಾದ ದೃಶ್ಯ ಬಸ್ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಸ್ ನಿರ್ವಾಹಕ ಬ್ಯಾಗ್ನಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳ ದೋಚಿದ್ದಾನೆನ್ನಲಾಗಿದೆ. ಬ್ಯಾಗ್ನಲ್ಲಿದ್ದ 4,500 ರೂ. ಹಣವನ್ನು ಈ ಖದೀಮ ಎಗರಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
14/06/2022 10:25 am