ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಣಿ: ಮನೆಯಲ್ಲಿದ್ದ ಕಪಾಟು ಮುರಿದು ನಗದು-ಚಿನ್ನಾಭರಣ ಕಳವು

ವಿಟ್ಲ: ಇಲ್ಲಿನ ಸೂರಿಕುಮೇರು ಎಂಬಲ್ಲಿ ಹೈವೇ ಚಿಕನ್ ಸ್ಟಾಲ್ ಬಳಿಯ ಎರಡು ಮನೆ ಮತ್ತು ಒಂದು ಅಂಗಡಿಗೆ ಶನಿವಾರ ರಾತ್ರಿ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲ ಜಾಲಾಡಿದ್ದಾರೆ. ಹಾಗೂ ಒಂದು ಮನೆಯಿಂದ ಬಾಡಿಗೆ ನೀಡಲು ತೆಗೆದಿಟ್ಟಿದ್ದ ಒಂದು ಸಾವಿರ ಹಣ, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಮತ್ತು ಚಿನ್ನವೆಂದು ಭಾವಿಸಿ ಕೆಲವು ಗೋಲ್ಡ್ ಆಭರಣಗಳನ್ನು, ಬೆಳ್ಳಿಯ ಕಾಲು ಚೈನ್ ದೋಚಿದ್ದಾರೆ. ಮತ್ತು ಇನ್ನೊಂದು ಮನೆಯ ಕಪಾಟು ಜಾಲಾಡಿ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಕಳ್ಳತನ ಮಾಡಿದ್ದಾರೆ.

ಅಂಗಡಿಯಲ್ಲಿ ಏನೂ ಸಿಗದೆ ಅಲ್ಲಿದ್ದ ಕೆಲವು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿದ್ದಾರೆ, ಕಳ್ಳತನ ನಡೆದ ಮನೆಯು ಬಾಡಿಗೆಯದ್ದಾಗಿದ್ದು ಬಡ ಕುಟುಂಬಗಳು ಅದರಲ್ಲಿ ನೆಲೆಸಿತ್ತು. ಅನಾರೋಗ್ಯ ನಿಮಿತ್ತ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಒಂದು ಕುಟುಂಬ ಬೀಗಹಾಕಿ ಹೋಗಿದ್ದರು. ಇನ್ನೊಂದು ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದ ಸಮಯದಲ್ಲೇ ಕಳ್ಳತನ ನಡೆದಿದೆ. ಚಿಕನ್ ಸ್ಟಾಲ್‌ನವರು ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ತುಂಡು ಮಾಡಿದ ಬೀಗಗಳು ಎಸೆದ ರೀತಿಯಲ್ಲಿ ಕಾಣ ಸಿಕ್ಕಿದ್ದು ಘಟನೆ ನಡೆದ ಬಗ್ಗೆ ಅರಿವಾಗಿದೆ. ರಾತ್ರಿ ವೇಳೆ ಕಳ್ಳತನ ನಡೆಸುವ ಜಾಲವೊಂದು ಹಲವೆಡೆ ಸಕ್ರಿಯವಾಗಿದ್ದು ಯಾರೂ ಮನೆ ಬಿಟ್ಟು ಎಲ್ಲೂ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Edited By : Nagaraj Tulugeri
Kshetra Samachara

Kshetra Samachara

05/06/2022 03:27 pm

Cinque Terre

7.27 K

Cinque Terre

0

ಸಂಬಂಧಿತ ಸುದ್ದಿ