ಬಂಟ್ವಾಳ: ಬಾವಿ ಕಾಣೆಯಾಗಿದೆ ಎಂದು ಪಿಡಿಒ ಒಬ್ಬರು ದೂರು ನೀಡಿದ್ದಾರೆ. ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2012-13ನೇ ಸಾಲಿನಲ್ಲಿ ಸಾರ್ವಜನಿಕವಾಗಿ ತೆರೆದ ಬಾವಿ ಮಾಡಲಾಗಿದ್ದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಕಾನೂನುಬಾಹಿರವಾಗಿ ಮುಚ್ಚಿದ್ದಾರೆ ಎಂದು ಪಿಡಿಒ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
73,305 ರೂ ಅನುದಾನದಲ್ಲಿ ಬಾವಿ ಮಾಡಲಾಗಿತ್ತು. ಪ್ರಸ್ತುತ ತೆರೆದ ಸಾರ್ವಜನಿಕ ಬಾವಿಯನ್ನು ಸ್ಥಳೀಯ ದಯಾನಂದ ಪೂಜಾರಿ ಎಂಬವರು ಕಾನೂನು ಬಾಹಿರವಾಗಿ ಸಂಪೂರ್ಣವಾಗಿ ಮುಚ್ಚಿ ಬಾವಿಯ ಸ್ಥಳವನ್ನು ಆಕ್ರಮಿಸಿಕೊಂಡಿರುವ ಕುರಿತು ದೂರು ನೀಡಿರುವ ಪಿಡಿಒ, ಕಾನೂನುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Kshetra Samachara
28/05/2022 07:28 pm