ಉಡುಪಿ : ವೃದ್ಧೆಯೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ್ದು ಬಳಿಕ ಅವರು ಸಾವನ್ನಪ್ಪಿದ ಘಟನೆ ನಡೆದಿದೆ.
ಜೋಡುಕಟ್ಟೆಯ ಜ್ಯಾಕಲೀನ್ ಡೇಸಾ ಅವರೊಂದಿಗೆ ವಾಸವಿದ್ದ ಅವರ ತಾಯಿ ಬಿ.ವಿ.ಡೇಸಾ (82) ಮೃತರು. ಅವರಿಗೆ ಮೇ 8ರಂದು ಬಿ.ವಿ.ಬಲ್ಲಾಳ್ ಹಾಗೂ ಮನೆಯವರು ಕಟ್ಟಿಗೆ ಮತ್ತು ಆಯುಧಗಳಿಂದ ಹಲ್ಲೆ ಮಾಡಿದ್ದರು. ಅದರ ಆಘಾತದಿಂದಾಗಿ ಮೇ 11ರಂದು ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಗೆ ಮೇಬಲ್ ಸುಮಿತ್ರಾ ಮತ್ತು ಕುಟುಂಬದವರು, ಮೆರ್ಲಿನ್ ಮತ್ತು ಅವಳ ಗಂಡ, ಪರಮೇಶ್ವರ, ಮಲ್ಲಿಕಾ ಭಂಡಾರಿ ಮತ್ತು ಅವರ ಕುಟುಂಬದವರು ಹಾಗೂ ಬಾಡಿಗೆದಾರರು, ಅಬ್ದುಲ್ ಅಝೀಝ್ ಮತ್ತು ಕುಟುಂಬದವರು, ಉಷಾ ಯೋಗಿಂದ್ರನಾಥ್, ಸಂದೀಪ್ ಮತ್ತು ಕುಟುಂಬದವರು, ಓರ್ವ ಅಪರಿಚಿತ ಮಹಿಳೆ ಮತ್ತು ಇತರರು ಸಹಕಾರ ನೀಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/05/2022 03:29 pm