ಕೊಲ್ಲೂರು: ಬೈಂದೂರು ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ವಿಜಯ ಪೂಜಾರಿಯನ್ನು ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಕಾಯ್ಕಿಣಿ ನೇತೃತ್ವದ ಅಪರಾಧ ಪತ್ತೆ ದಳದ ತಂಡ ಮುಂಬಯಿಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಆರೋಪಿಗೆ ಮೇ.19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯಿಂದ 24.4 ಗ್ರಾಂ ತೂಕದ ಒಂದು ಚಿನ್ನದ ಸರ 38.6 ಗ್ರಾಂ ತೂಕದ ಕರಿಮಣಿ ಇರುವ ಚಿನ್ನದ ಮಾಂಗಲ್ಯ ಸರ, ಮೋಟಾರ್ ಸೆ„ಕಲ್, ಮೊಬೈಲ್ ಸಹಿತ 3,25,500 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಲಾಗಿದೆ.
Kshetra Samachara
11/05/2022 12:25 pm