ಬೈಂದೂರು:ಅಳಿಯನೊಬ್ಬ ವಿಕಲಚೇತನ ಅತ್ತೆಗೆ ಎಳನೀರಿನಿಂದ ಹಲ್ಲೆ ಮಾಡಿದ ಘಟನೆ ಬೈಂದೂರಿನಲ್ಲಿ ನಡೆದಿದೆ. ಮಾಚಿ ಖಾರ್ವಿ ಹಲ್ಲೆಗೊಳಗಾದ ಮಹಿಳೆ ಎನ್ನಲಾಗಿದ್ದು, ಮಾಚಿ ಖಾರ್ವಿ ಮಗಳು ಲಕ್ಷ್ಮಿಯನ್ನು ಗಂಗಾಧರ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು.
ಆದರೆ ಆತನ ಕಿರುಕುಳ ತಾಳದೆ ಲಕ್ಷ್ಮಿ ತವರು ಮನೆಗೆ ಬಂದಿದ್ದಳು, ಬಳಿಕ ಅತ್ತೆ ಮನೆಗೆ ಬಂದ ಗಂಗಾಧರ ತನ್ನ ಪತ್ನಿಗೆ ಹೊಡೆಯಲು ಮುಂದಾಗಿದ್ದು, ತಡೆಯಲು ಬಂದ ಅತ್ತೆಗೆ ಎಳನೀರು ಎಸೆದಿದ್ದಾನೆ. ನಂತರ ಅಮ್ಮ ಮಗಳು ಕೂಗಡುವುದನ್ನು ಗಮನಿಸಿದ ಸ್ಥಳೀಯರು ಮನೆಗೆ ಆಗಮಿಸಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
07/05/2022 02:17 pm