ಕಾರ್ಕಳ: ಪತಿಯೊಂದಿಗೆ ಜಗಳ ಮಾಡಿದ ಪತ್ನಿ ಮನನೊಂದು ನೇಣಿಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಮಟನ್ ಸ್ಟಾಲ್ ಬಳಿ ನಡೆದಿದೆ.
ಮೃತರನ್ನು ಲೋಕೇಶ್ ಎಂಬುವರ ಪತ್ನಿ ಶೋಭಾ ಎಂದು ಗುರುತಿಸಲಾಗಿದೆ. ಮದ್ಯಪಾನ ಮಾಡಿ ಮನೆಗೆ ಬಂದ ಲೋಕೇಶ್ ಪತ್ನಿ ಶೋಭಾರೊಂದಿಗೆ ಜಗಳ ಮಾಡಿದ್ದು, ಇದೇ ಸಿಟ್ಟಿನಲ್ಲಿ ಶೋಭಾ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/05/2022 11:20 am