ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ಶಿಲುಬೆ ತೆಗೆದು ಕೇಸರಿ ಧ್ವಜ ಹಾಕಿ, ಹನುಮಾನ್ ದೇವರ ಫೋಟೋ ಮತ್ತು ದೀಪ ಇಟ್ಟ ಕಿಡಿಗೇಡಿಗಳು

ಕಡಬ: ಕಡಬ ತಾಲೂಕಿನ ಪೇರಡ್ಕ ಸಮೀಪದ ಇಮ್ಯಾನ್ಯೂವೆಲ್ ಎ.ಜಿ ಚರ್ಚ್‌ನ ಗೋಪುರದ ಶಿಲುಬೆಯನ್ನು ಕಿತ್ತು ಕೇಸರಿ ಧ್ವಜ ಹಾಕಿದ ದುಷ್ಕರ್ಮಿಗಳು ಚರ್ಚ್ ಒಳಗಡೆ ಹನುಮಾನ್ ದೇವರ ಫೋಟೋ ಇರಿಸಿ ದೀಪ ಇಟ್ಟಿರುವ ಘಟನೆ ನಡೆದಿದೆ.

ಧರ್ಮಸ್ಥಳ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುವ ಮತ್ತು ಕಡಬ ತಾಲೂಕಿಗೆ ಒಳಪಡುವ ಪೇರಡ್ಕದಲ್ಲಿ ಇರುವ ಇಮ್ಯಾನುವೆಲ್ ಎ.ಜಿ ಚರ್ಚ್‌ನಲ್ಲಿ ದುರಸ್ತಿ ಕಾಮಗಾರಿಗಳು ನಡೆಯುತ್ತಿದೆ. ನಿನ್ನೆ ರಾತ್ರಿ ಇಲ್ಲಿಗೆ ಆಗಮಿಸಿರುವ ಕಿಡಿಗೇಡಿಗಳು ಚರ್ಚ್‌ನ ಗೋಪುರದಲ್ಲಿರುವ ಶಿಲುಬೆಯನ್ನು ತೆಗೆದು ಕೇಸರಿ ಧ್ವಜ ಹಾಕಿದ್ದಾರೆ. ಚರ್ಚ್ ಬಾಗಿಲು ಒಡೆದು ಒಳಗಡೆ ಪ್ರವೇಶಿಸಿ ಹನುಮಾನ್ ದೇವರ ಫೋಟೋ ಇಟ್ಟು ದೀಪ ಹಚ್ಚಿರುವ ಘಟನೆ ನಡೆದಿದೆ ಎನ್ನಲಾಗಿದೆ. ಮಾತ್ರವಲ್ಲದೆ ಇಲ್ಲಿ ಮದ್ಯದ ಬಾಟಲಿಗಳೂ ಕಾಣಸಿಕ್ಕಿವೆ ಎನ್ನಲಾಗಿದೆ. ಈ ಬಗ್ಗೆ ಈ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಒಂದು ವಿಡಿಯೋ ಒಂದು ಮಲಯಾಳಂ ಭಾಷೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಸದ್ಯ ಈ ಧ್ವಜ ಹಾಗೂ ಹನುಮಾನ್ ಫೋಟೋವನ್ನು ಚರ್ಚ್‌ನವರೇ ಹೆಚ್ಚಿನ ಸಮಸ್ಯೆ ಆಗುವುದು ಬೇಡ ಎಂದು ತೆರವು ಮಾಡಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.

Edited By : Nagesh Gaonkar
PublicNext

PublicNext

02/05/2022 07:50 pm

Cinque Terre

57.85 K

Cinque Terre

21

ಸಂಬಂಧಿತ ಸುದ್ದಿ