ಮುಲ್ಕಿ: ವಾಲಿಬಾಲ್ ಆಟವಾಡುತ್ತಿದ್ದ ಅಮಾಯಕ ದಲಿತ ಯುವಕನನ್ನು ಮುಲ್ಕಿ ಇನ್ಸ್ಪೆಕ್ಟರ್ ಕುಸುಮಾಧರ ಸೂಚನೆ ಮೇರೆಗೆ ಠಾಣೆಯ ಸಿಬ್ಬಂದಿ ಕರೆಸಿ ದೌರ್ಜನ್ಯ ಎಸಗಿದ್ದಾರೆ ಇಂದು ದಲಿತ ಸಂಘರ್ಷ ಸಮಿತಿಯ ನಾಯಕ ಸೀತಾರಾಮ್ ಲೈಟ್ ಹೌಸ್ ಆರೋಪಿಸಿದ್ದಾರೆ.
ಹಳೆಯಂಗಡಿಯ ಲೈಟ್ ಹೌಸ್ ಬಳಿ ಕೆಲ ಯುವಕರು ಬುಧವಾರ ಸಂಜೆ ವಾಲಿಬಾಲ್ ಆಟ ಆಡುತ್ತಿದ್ದು ಅಲ್ಲಿಗೆ ಬಂದ ಮುಲ್ಕಿ ಪೊಲೀಸ್ ಠಾಣಾ ಸಿಬ್ಬಂದಿ ವಾಲಿಬಾಲ್ ಆಟವಾಡುತ್ತಿದ್ದ ಯುವಕ ರಕ್ಷಿತ ಎಂಬಾತನನ್ನು ಪ್ರಶ್ನಿಸಿ ಬಳಿಗೆ ಕರೆದು "ನಿನ್ನ ಬಿಂಬ ಕಪ್ಪಾಗಿದೆ ನಿನ್ನನ್ನು ಟೆಸ್ಟ್ ಮಾಡಿಸಬೇಕು ತನಿಖೆ ನಡೆಸಬೇಕು ಎಂದು ಠಾಣೆಯ ಜೀಪ್ ಹತ್ತಲು ಹೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ಆಗ ಸಿಬ್ಬಂದಿ ಉಡಾಫೆಯಾಗಿ ವರ್ತಿಸಿದ್ದಾನೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ರಕ್ಷಿತ್ ತಂದೆ ಸೀತಾರಾಮ್ ರವರು ಅಮಾಯಕನನ್ನು ಠಾಣೆಗೆ ಕರೆದುಕೊಂಡು ಹೋಗುವ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ ಅವರ ಮೇಲೆ ದೌರ್ಜನ್ಯ ನಡೆಸಿ ಉಡಾಫೆಯಾಗಿ ಉತ್ತರ ನೀಡಿದ್ದಾನೆ ಎಂದು ಸೀತಾರಾಮ್ ಆರೋಪಿಸಿದ್ದಾರೆ.
ಅಮಾಯಕನನ್ನು ಬಂಧಿಸಿದ ವಿರುದ್ಧ ದಲಿತ ಸಂಘರ್ಷ ಸಮಿತಿಯ ನಾಯಕರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು ಪರಿಸರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಬಗ್ಗೆ ಸೀತಾರಾಮ್ ಮಾತನಾಡಿ ಅಮಾಯಕರನ್ನು ಬಂಧಿಸಿ ದೌರ್ಜನ್ಯ ನಡೆಸಿದ ಮೂಲ್ಕಿ ಪೊಲೀಸರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
Kshetra Samachara
28/04/2022 10:40 pm