ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ಸೇವನೆ: ಮಣಿಪಾಲ ಪೊಲೀಸರಿಂದ ಇಬ್ಬರ ಬಂಧನ

ಮಣಿಪಾಲ: ಗಾಂಜಾ ಸೇವಿಸಿದ್ದ ಇಬ್ಬರು ವ್ಯಕ್ತಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದ ಸಹಾಯಕ ಪೊಲೀಸ್ ಉಪನಿರೀಕ್ಷಕ ಉಮೇಶ್ ಜೋಗಿ ಅವರು ರೌಂಡ್ ನಲ್ಲಿದ್ದಾಗ ಕಾಯಿನ್ ಸರ್ಕಲ್ ಬಳಿ ಹಾಸನ ಮೂಲದ ಮೇಘ ರಾಜು (30) ಮತ್ತು ಆಕಾಶ್ ಬಿ.ಎಸ್.ಅವರು ಗಾಂಜಾ ಸೇವಿಸಿದವರಂತೆ ಕಂಡು ಬಂದರು.

ಅವರ ಬಾಯಿಯಿಂದ ಗಾಂಜಾದ ಘಾಟು ವಾಸನೆ ಬರುತ್ತಿದ್ದ ಕಾರಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

11/04/2022 11:45 am

Cinque Terre

9.74 K

Cinque Terre

0