ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಗೋ ಕಳ್ಳರಿಗೆ ಸ್ವ ಸಮುದಾಯವೇ ಬಹಿಷ್ಕಾರ ಹಾಕಲಿ"

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿ ಮೀರಿದೆ. ಕೃಷಿಕರಿಗೆ ತಮ್ಮ ಗೋವುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. 3 ದಿನಗಳ ಹಿಂದೆ ಇಲ್ಲಿ ಐಷಾರಾಮಿ‌ ಕಾರಿನಲ್ಲೇ ದನ ಕದ್ದೊಯ್ದ ಕೃತ್ಯ ನಡೆದಿತ್ತು. ಇದೀಗ ಮೌನ ಮುರಿದಿರುವ ಜಿಲ್ಲಾ ಮುಸ್ಲಿಂ ಒಕ್ಕೂಟ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಕಾರ್ಕಳದಲ್ಲಿ ಕೃಷಿಯೇ ಮುಖ್ಯ ಕಸುಬು. ಜೊತೆಗೆ ಹೈನುಗಾರಿಕೆ ನಂಬಿ ಅನೇಕ ಕುಟುಂಬಗಳು ಜೀವನ‌ ನಡೆಸುತ್ತಿವೆ. ಆದರೆ, ಕಾರ್ಕಳದ ಹಲವು ಗ್ರಾಮಗಳಲ್ಲಿ ತಾವು ಸಾಕಿದ ಗೋವುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ತಮ್ಮ ಹಟ್ಟಿಯನ್ನು ಚಿನ್ನದ ಪೆಟ್ಟಿಗೆಯಂತೆ ಕಾಯುವ ಪರಿಸ್ಥಿತಿ ಬಂದೊದಗಿದೆ. ಮೊನ್ನೆ ಐಷಾರಾಮಿ ಕಾರಲ್ಲೇ ಗೋ ಕಳವು ಮಾಡಿದ ಕೃತ್ಯವಂತೂ ಹೇಯ! ಜಿಲ್ಲಾ ಮುಸ್ಲಿಂ ಒಕ್ಕೂಟ ಈ ಕೃತ್ಯವನ್ನು ಖಂಡಿಸಿದ್ದು, ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದಿದೆ.

ಗೋ ಕಳ್ಳತನ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಕೋಮು‌ ಸಾಮರಸ್ಯವೂ ಕದಡುತ್ತಿದೆ. ಯಾರೋ ಒಂದಿಬ್ಬರು ಮಾಡುವ ಕೃತ್ಯಕ್ಕೆ ಇಡೀ ಸಮುದಾಯ ಬೆಲೆ ತೆರುವಂತಾಗಿದೆ. ಹೀಗಾಗಿ ಮುಸ್ಲಿಂ ಧರ್ಮಗುರುಗಳು ಮತ್ತು ಜನಪ್ರತಿನಿಧಿಗಳು ಈ ಗೋ ಕಳ್ಳರಿಗೆ ಬಹಿಷ್ಕಾರ ಹಾಕುವ ಮೂಲಕ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ಟಾರೆ ಒಂದಿಬ್ಬರು‌ ಮಾಡುವ ಕೃತ್ಯದಿಂದಾಗಿ ಇಡೀ ಒಂದು ಸಮುದಾಯ ಅನುಭವಿಸಬೇಕಾಗಿ ಬಂದಿದೆ. ಗೋಕಳ್ಳರಿಗೆ ಎಲ್ಲ ರೀತಿಯಲ್ಕೂ ಬಹಿಷ್ಕಾರ ಹಾಕಿದರೆ ಗೋ ಕಳ್ಳತನ ನಿಯಂತ್ರಣಕ್ಕೆ ಬರಬಹುದು ಎಂಬುದು ಪ್ರಜ್ಞಾವಂತರ ಆಗ್ರಹ.

Edited By : Shivu K
Kshetra Samachara

Kshetra Samachara

07/04/2022 09:33 am

Cinque Terre

24.07 K

Cinque Terre

3

ಸಂಬಂಧಿತ ಸುದ್ದಿ