ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಹಿಳೆ ಮೇಲೆ ಹಲ್ಲೆ : ಸಾಮಾಜಿಕ ಕಾರ್ಯಕರ್ತ ಸೇರಿ ಮೂವರು ಅರೆಸ್ಟ್

ಮಂಗಳೂರು: ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಮೈಮುನಾ ಫೌಂಡೇಶನ್ ಆಶ್ರಮದ ಸಂಸ್ಥಾಪಕ 'ಆಪದ್ಬಾಂಧವ' ಆಸೀಫ್ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಪದ್ಬಾಂಧವ ಆಸೀಫ್, ಶಿವಲಿಂಗಂ, ಅಫ್ತಾಬ್ ಬಂಧಿತ ಆರೋಪಿಗಳು. ಕಳೆದ 1 ವರ್ಷದಿಂದ ಮೈಮುನಾ ಫೌಂಡೇಶನ್ ಆಶ್ರಮದಲ್ಲಿ ಸಂತ್ರಸ್ತ ಮಹಿಳೆ ವನಜಾ ಕೆಲಸ ಮಾಡುತ್ತಿದ್ದರು. ಈ ನಡುವೆ ಮೈಮುನಾ ಫೌಂಡೇಶನ್ ಆಶ್ರಮದ ವಾರ್ಡನ್ ಹಾಗೂ ಮ್ಯಾನೇಜರ್ ಕಾರ್ಯ ನಿರ್ವಹಿಸುತ್ತಿದ್ದ ಶಶಿಧರ್ ವಂಚನೆ ಮಾಡಿ ಪರಾರಿಯಾಗಿದ್ದ ಎಂದು ಹೇಳಲಾಗಿದೆ.

ಈ ಗೋಲ್ ಮಾಲ್ ನಲ್ಲಿ ಸಂತ್ರಸ್ತ ಮಹಿಳೆ ವನಜಾ ಕೂಡಾ ಭಾಗಿಯಾಗಿದ್ದಾರೆಂದು ಆರೋಪಿಸಿದ 'ಆಪದ್ಬಾಂಧವ' ಆಸೀಫ್ ಈ ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಬೆದರಿಕೆಯೊಡ್ಡಿದ್ದಾನೆ ಅಲ್ಲದೆ ತನ್ನ ಸಹಚರ ಶಿವಲಿಂಗಂನೊಂದಿಗೆ ಸೇರಿ ವಿಕೆಟ್, ಬೆಲ್ಟ್, ಕುರ್ಚಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೈದ ಆರೋಪ ಮಾಡಲಾಗಿದೆ.

ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಂತ್ರಸ್ತ ಮಹಿಳೆಯ ಎರಡು ಮೊಬೈಲ್ ಫೋನ್ ಗಳು, ಬ್ಯಾಂಕ್ ಪಾಸ್ ಪುಸ್ತಕ, ಟ್ಯಾಬ್ ಇತರ ದಾಖಲೆಗಳನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೆ ಆಕೆ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆಂದು ಸುಳ್ಳು ಹೇಳಿ ಆಸೀಫ್ ಚಿಕಿತ್ಸೆ ಕೊಡಿಸಿದ್ದಾನೆ. ಆ ಬಳಿಕ ಮೈಮುನಾ ಫೌಂಡೇಶನ್ ಮತ್ತೊಬ್ಬ ಪಾಲುದಾರ ಅಫ್ತಾಬ್ ವನಜಾರನ್ನು ಕೂಡಿ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
Kshetra Samachara

Kshetra Samachara

03/04/2022 03:02 pm

Cinque Terre

20.88 K

Cinque Terre

0

ಸಂಬಂಧಿತ ಸುದ್ದಿ