ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಿಟಕಿ ಮೂಲಕವೇ ಮನೆಯ ಚಿನ್ನಾಭರಣ ಕದ್ದೊಯ್ದ ಕಳ್ಳರು!

ಉಡುಪಿ : ಮನೆಯ ಹಾಲ್ ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಿಟಕಿ ಮೂಲಕ ಕಳವು ಮಾಡಿರುವ ಘಟನೆ ರಾತ್ರಿ ವೇಳೆ ನಗರದ ಗುಂಡಿಬೈಲು ಎಂಬಲ್ಲಿ ನಡೆದಿದೆ.

ಗುಂಡಿಬೈಲಿನ ರಮಾನಂದ ಕೋಟ್ಯಾನ್ ಎಂಬವರ ಮನೆಯ ಹಾಲ್ ನ ಟಿಪಾಯಿ ಮೇಲೆ ಇಟ್ಟಿದ್ದ ಆರೂವರೆ ಪವನ್ ತೂಕದ ಚಿನ್ನದ ಚೈನ್ ಮತ್ತು ನೀಲಿ ಹರಳಿನ ಲಾಕೆಟ್ ಇರುವ ಮೂರೂವರೆ ಪವನ್ ತೂಕದ ಚಿನ್ನದ ಚೈನ್ ನ್ನು ಮನೆಯ ಕಿಟಕಿಯ ಮೂಲಕ ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಮೌಲ್ಯ 3.60 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

28/03/2022 06:00 pm

Cinque Terre

18.1 K

Cinque Terre

1

ಸಂಬಂಧಿತ ಸುದ್ದಿ