ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಶೀರ್ ಅಲಿಯಾಸ್ ಅಬ್ದುಲ್ ಬಶೀರ್ ಅಲಿಯಾಸ್ ರಾಧುಕಟ್ಟೆ ಬಶೀರ್ ಬಂಧಿತ ಆರೋಪಿ. ವಿಟ್ಲಪಡ್ನೂರು ಗ್ರಾಮದ ಕಡಂಬು ಎಂಬಲ್ಲಿರುವ ಹೈದರಾಲಿ ಅವರ ಬೀಗ ಹಾಕಿದ ಮನೆಯ ಬೀಗವನ್ನು ಮುರಿದು ರಾತ್ರಿ ಬೆಡ್‌ರೂಂನಲ್ಲಿರುವ ಎರಡು ಗಾದ್ರೇಜ್‌ಗಳಲ್ಲಿಟ್ಟಿದ್ದ 2.5 ಗ್ರಾಂ ಚಿನ್ನದ ಉಂಗುರ-1 ಹಾಗೂ 4 ಗ್ರಾಂ ನ ಕಿವಿಯ ಓಲೆಯನ್ನು ಕಳವುಗೈದಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಯನ್ನು ವಿಟ್ಲ ಠಾಣಾ ವ್ಯಾಪ್ತಿಯ ರಾಧುಕಟ್ಟೆ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಚಿನ್ನದ ಕಿವಿಯೋಲೆ ಮತ್ತು ಉಂಗುರ ಹಾಗೂ ಕೃತ್ಯಕ್ಕೆ ಬಳಸಲಾದ ಯಮಹಾ ಕಂಪೆನಿಯ ಮೋಟಾರ್ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯು ವಿಟ್ಲ ಠಾಣಾ ವ್ಯಾಪ್ತಿಯ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ. ಎಂಓಬಿ ಆಸಾಮಿಯಾಗಿರುವುದಲ್ಲದೇ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಚಿನ್ನದಂಗಡಿ ಕೊರೆದು ಕಳ್ಳತನ ಮಾಡಿದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಿಲ್ಲಾ ಕೇಂದ್ರ ಕಾರಾಗೃಹ ಮಂಗಳೂರು ಇಲ್ಲಿಂದ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಋಷಿಕೇಶ್ ಭಗವಾನ ಸೋನಾವಣೆ ಮತ್ತು ಅಡಿಷನಲ್ ಎಸ್‌ಪಿ ಕುಮಾರಚಂದ್ರರವರುಗಳ ಮಾರ್ಗದರ್ಶನ, ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಪ್ರತಾಪ ಸಿಂಗ್ ಥೂರಟ್ ಅವರ ನೇತ್ರತ್ವ, ನಾಗರಾಜ್ ಹೆಚ್ ಈ ಪೊಲೀಸ್ ನಿರೀಕ್ಷಕರು ವಿಟ್ಲ ಠಾಣೆ ರವರ ಸಾರಥ್ಯ , ಎಸ್ ಐ ಸಂದೀಪಕುಮಾರ್ ಶೆಟ್ಟಿ, ಸಂಜೀವ ಪುರುಷ ಪಿಎಸೈ ತನಿಖೆ1, ಸಿಬ್ಬಂದಿಯಾದ ಜಯರಾಮ, ಪ್ರಸನ್ನ, ಹೇಮರಾಜ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Kshetra Samachara
27/03/2022 10:25 pm