ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: 'ಸೈಬರ್ ಕ್ರೈಮ್ ಬಗ್ಗೆ ಎಚ್ಚರವಿರಲಿ'

ಮೂಡುಬಿದಿರೆ: ತಾಲೂಕಿನ ತಹಶೀಲ್ದಾರರ ಗ್ರಾಮ ವಾಸ್ತವ್ಯ ಸಭೆಯು ಬ್ರಹ್ಮಶ್ರೀ ಗುರುನಾರಾಯಣ ಸೇವಾಸಂಘ ಇರುವೈಲಿನಲ್ಲಿ ಗುರುವಾರದಂದು ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮೂಡುಬಿದಿರೆ ಉಪನಿರೀಕ್ಷಕ ಅಧಿಕಾರಿ ದಿವಾಕರ್ ರೈ, ಪೊಲೀಸ್ ಇಲಾಖೆಯು ತುರ್ತಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಪೊಲೀಸ್ ಇಲಾಖೆಯೇ ಮನೆ ಬಾಗಿಲಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುತ್ತಿದೆ. ಸರಕಾರ ರೂಪಿಸುವ ಸವಲತ್ತುಗಳನ್ನು ಉಪಯೋಗಿಸಿ, ಅದಕ್ಕೆ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಮತ್ತು ಸಹಕರಿಸಬೇಕು ಎಂದರು.

ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿರುವ ಅವರು ಯಾವುದೇ ಮೊಬೈಲ್ ಸಂದೇಶ, ಲಿಂಕ್ ಅಥವಾ ಯಾವುದೇ‌ ಇನ್ನಿತರ ಅಪ್ಲಿಕೇಶನ್‌ಗಳಿಗೆ‌ ಮಾರು ಹೋಗದೆ ಜಾಗೃತಿ ವಹಿಸಿ ಎಂದು ತಿಳಿಸಿದರು.

Edited By :
Kshetra Samachara

Kshetra Samachara

19/03/2022 06:53 pm

Cinque Terre

10.14 K

Cinque Terre

0

ಸಂಬಂಧಿತ ಸುದ್ದಿ