ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆಯಲ್ಲಿ ಕಿಡಿಗೇಡಿಗಳಿಂದ ಹಿಜಾಬ್ ಕುರಿತು ಗೋಡೆ ಬರಹ: ದೂರು ದಾಖಲು

ಮಲ್ಪೆ: ಮಲ್ಪೆಯ ಬೈಲಕೆರೆ ಪರಿಸರದಲ್ಲಿ ಕಿಡಿಗೇಡಿಗಳು ಹಿಜಾಬ್ ಪರವಾಗಿ ಗೋಡೆಬರಹ ಬರೆದಿದ್ದು ಸ್ಥಳದಲ್ಲಿ ಜನ ಜಮಾಯಿಸಿದ ಪ್ರಸಂಗ ನಡೆದಿದೆ.

ಬೈಲಕೆರೆಯಲ್ಲಿರುವ ಅನಧಿಕೃತ ಕಟ್ಟಡವೊಂದರ ಗೋಡೆಯಲ್ಲಿ ಈ ಬರಹ ಕಂಡು ಬಂದಿದೆ.ವಿಷಯ ತಿಳಿಯುತ್ತಿದ್ದಂತೆಯೇ

ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವೃತ್ತ ನಿರೀಕ್ಷಕ ಶರಣ ಬಸವ ಪಾಟೀಲ್ ಸ್ಥಳದಿಂದ ತೆರಳುವಂತೆ ಹಿಂದೂ ಕಾರ್ಯಕರ್ತರ ಮನವೊಲಿಸಿದರು.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿರುವವರನ್ನು ಬಂಧಿಸುವಂತೆ ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Edited By : Nagesh Gaonkar
PublicNext

PublicNext

17/03/2022 10:44 pm

Cinque Terre

52.8 K

Cinque Terre

9

ಸಂಬಂಧಿತ ಸುದ್ದಿ