ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಡಿಎ ಇಂಜಿನಿಯರ್‌ಗಳಿಗೆ ಎಸಿಬಿ ಗುಮ್ಮ ತೋರಿಸಿ 10 ಲಕ್ಷ ಉಂಡೇನಾಮ

ಬೆಂಗಳೂರು: ಬಿಡಿಎ ಮೇಲೆ ಎಸಿಬಿ ದಾಳಿ ನಂತರ ಹಲವು ಭ್ರಷ್ಟ ಅಧಿಕಾರಿಗಳಿಗೆ ನಿದ್ದೆ ಬಂದಿಲ್ಲ.‌ಈಗಾಗಲೇ ಎಸಿಬಿ ಅಧಿಕಾರಿಗಳು ಒಂದಷ್ಟು ಅಧಿಕಾರಿಗಳ ಲಿಸ್ಟ್ ರೆಡಿ ಮಾಡಿದೆ. ಸದ್ಯ ಕೆಲವು ವಂಚಕರು ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ಎಸಿಬಿ ಅಧಿಕಾರಿಗಳ ಜೊತೆ ಮಾತುಕತೆ ಮಾಡ್ತೀವಿ ನಿಮ್ಮ ಹೆಸ್ರು ಕೈ ಬಿಡಿಸ್ತಿವಿ ಅಂತಾ ಹೇಳಿ ಬಿಡಿಎ ಇಂಜಿನಿಯರ್ ಗಳಿಗೆ ಹತ್ತು ಲಕ್ಷ ಟೋಪಿ ಹಾಕಿದ್ದಾರೆ.

ವಂಚಿಸಿದ್ದ ಚೇತನ್, ಪ್ರವೀಣ್, ಮನೋಜ್ ಬಂಧಿತ ಆರೋಪಿಗಳನ್ನ ಹೈಗ್ರೌಂಎ್ ಪೊಲೀಸ್ರು ಬಂಧಿಸಿದ್ದಾರೆ‌. ಹೆಚ್.ಎಸ್. ಆರ್. ಲೇಔಟ್‌ನ ಬಿಡಿಎ ಕಚೇರಿಯಲ್ಲಿ ಕೆಲಸ ಮಾಡ್ತಿರೋ ಅಸಿಸ್ಟೆಂಟ್ ಇಂಜಿನಿಯರ್ ಅರವಿಂದ್ ನೀಡಿರೋ ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಸಿಬಿ ದಾಳಿ ವೇಳೆ ಕಾಡುವೀಸನಹಳ್ಳಿಯಲ್ಲಿನ 1.8 ಎಕರೆ ಜಮೀನಿನ ಕಡತದ ವಿಚಾರವಾಗಿ ಅಸಿಸ್ಟೆಂಟ್ ಇಂಜಿನಿಯರ್ ಅರವಿಂದ್ ಭ್ರಷ್ಟಾಚಾರ ಎಸಗಿರೋ ಆರೋಪ ಕೇಳಿ ಬಂದಿತ್ತು. ಅಲ್ಲದೆ ಇಂಜಿನಿಯರ್ ಗಳಾದ ಮಹದೇವ್ ಗೌಡ ಹಾಗೂ ಗೋವಿಂದರಾಜು ಎಂಬ ಸಿಬ್ಬಂದಿ ವಿರುದ್ಧವೂ ಆರೋಪ ಕೇಳಿ ಬಂದಿತ್ತು.ಇದ್ರಿಂದ ತಪ್ಪಿಸಿಕೊಳ್ಳೋಕೆ ಪ್ಲಾನ್ ಹಾಕಿದ್ದ ಮೂವರು, ಬಿಡಿಎ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದ ವಿಜಯ್ ಕುಮಾರ್ ಎಂಬಾತನನ್ನ ಸಂಪರ್ಕಿಸಿದ್ರು. ಆರೋಪಿ ವಿಜಯ್ ಕುಮಾರ್ ನನಗೆ ಎಸಿಬಿ ಅಧಿಕಾರಿಗಳು ಕ್ಲೋಸ್ ಇದ್ದಾರೆ. ಪ್ರಕರಣದಲ್ಲಿ ನಿಮ್ಮ ಹೆಸ್ರು ಬರ್ಬಾರ್ದು ಅಂದ್ರೆ 10 ಲಕ್ಷ ಕೊಡಿ ಎಂದು ಬೇಡಿಕೆ ಇಟ್ಟಿದ್ದ. ಅದರಂತೆ ಮೂವರು ಅಧಿಕಾರಿಗಳು ಸೇರಿ 10 ಲಕ್ಷ ಕೊಟ್ಟಿದ್ರು. ಆದ್ರೆ ಹಣ ಕೈಗೆ ಬಂದಿದ್ದೇ ತಡ ಹಣದ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದಿದ್ದ ಎಸಿಬಿ ಅಧಿಕಾರಿಗಳು ಅರವಿಂದ್‌ ನನ್ನ ವಿಚಾರಿಸಿ ಹೈಗ್ರೌಂಡ್ಸ್ ಠಾಣೆಗೆ ದೂರು ಕೊಡಿಸಿದ್ದಾರೆ. ದೂರಿನ ಆಧಾರದ ಮೇಲೆ ಚೇತನ್, ಪ್ರವೀಣ್, ಮನೋಜ್ ಎಂಬುವರನ್ನ ಬಂಧಿಸಲಾಗಿದ್ದು ತಪ್ಪಿಸಿಕೊಂಡಿರೋ ವಿಜಯ್ ಕುಮಾರ್ ಗಾಗಿ ಹುಡುಕಾಟ ನಡೆಸಲಾಗ್ತಿದೆ. ಕೇಸ್ ನಿಂದ ತಪ್ಪಿಸ್ತೀನಿ ಅಂದೋರು ಈಗ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ರೆ. ಭ್ರಷ್ಟಾಚಾರದ ಆರೋಪದಲ್ಲಿ ಹಣ ಕಳೆದುಕೊಂಡವರ ಮೇಲೂ ಕಾನೂನಿನ ಕತ್ತಿ ನೇತಾಡ್ತಿದೆ.

ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Nagesh Gaonkar
PublicNext

PublicNext

17/03/2022 06:32 pm

Cinque Terre

33.92 K

Cinque Terre

0

ಸಂಬಂಧಿತ ಸುದ್ದಿ