ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪುತ್ರಿಯ ಬರ್ತ್‌ಡೇ ಅದ್ದೂರಿಯಾಗಿ ಆಚರಿಸಲು ಪ್ಲ್ಯಾನ್ ಹಾಕಿದ್ದ ತಂದೆ ಆ ಕ್ಷಣಕ್ಕೆ ವಾರ ಇರುವಾಗಲೇ ಆತ್ಮಹತ್ಯೆ

ಮಂಗಳೂರು: ಪುತ್ರಿಯ ಐದನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಪ್ಲ್ಯಾನ್ ಹಾಕಿದ್ದ ತಂದೆ ಬರ್ತ್ ಡೇಗೆ ಒಂದು ವಾರ ಇರುವಾಗಲೇ ನೇಣಿಗೆ ಶರಣಾದ ಘಟನೆ ಕೊಲ್ಯ ಕನೀರು ತೋಟದ ಕನೀರು ಬೀಡುವಿನಲ್ಲಿ ನಡೆದಿದೆ.

ಕನೀರು ತೋಟದ ಕನೀರು ಬೀಡು ನಿವಾಸಿ ಪ್ರವೀಣ್ ಪೂಜಾರಿ(34) ಆತ್ಮಹತ್ಯೆಗೆ ಶರಣಾದ ತಂದೆ. ಪ್ರವೀಣ್ ಪೂಜಾರಿ ಖಾಸಗಿ ಬಸ್‌ನಲ್ಲಿ ಚೆಕ್ಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಸಂಜೆ 6ಗಂಟೆಗೆ ಮನೆಗೆ ಬಂದವರು ತಮ್ಮ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಸಂಜೆ 7.30 ಸುಮಾರಿಗೆ ಪತ್ನಿ ಮನೆಗೆ ಬಂದ ವೇಳೆ ಪ್ರವೀಣ್ ಪೂಜಾರಿ ಮನೆಯ ಮೇಲ್ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಪತ್ನಿಯೊಂದಿಗಿನ ಜಗಳವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

Edited By : Vijay Kumar
Kshetra Samachara

Kshetra Samachara

08/03/2022 12:30 pm

Cinque Terre

16.35 K

Cinque Terre

0

ಸಂಬಂಧಿತ ಸುದ್ದಿ