ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡಬ: ತಹಶೀಲ್ದಾರ್ ಕಚೇರಿಯಲ್ಲಿ ದಲ್ಲಾಳಿ ಆಸೀನ!; ಬಜ್ಜಿ ತಿನ್ನುವುದರಲ್ಲೇ ಸಿಬ್ಬಂದಿ ತಲ್ಲೀನ

ಕಡಬ: ಯಾವುದೇ ಸರಕಾರಿ ಕಚೇರಿ ಒಳಗಡೆ ಮಧ್ಯವರ್ತಿಗಳು, ಬ್ರೋಕರ್‌ ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಆದರೆ, ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಮಧ್ಯವರ್ತಿಗಳ ಕಾಟ ತಪ್ಪಿಲ್ಲ!

ಮಾ.5 ರಂದು ಕಡಬ ತಹಶೀಲ್ದಾರ್ ಕಚೇರಿಯಲ್ಲಿ ದಲ್ಲಾಳಿಯೊಬ್ಬ ಮೇಜಿನ ಮೇಲೆ ರಾಜಾರೋಷವಾಗಿ ಕುಳಿತಿರುವ ದೃಶ್ಯ ವೈರಲ್ ಆಗುತ್ತಿದೆ. ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಬಂದಾಗ ಹೊರಭಾಗದಲ್ಲಿಯೇ ನಿಂತು ಸಹಕರಿಸುತ್ತಾರೆ. ಆದರೆ, ಈ ವ್ಯಕ್ತಿ ಕಚೇರಿಯೊಳಗೆ ಬಂದು ಟೇಬಲ್ ಮೇಲೆ ಕುಳಿತುಕೊಳ್ಳುವಷ್ಟು ಸಲುಗೆ ಕೊಟ್ಟವರಾರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ.

ಹಾಗೇ, ಕೆಲಸದ ವೇಳೆಯೇ ಕಚೇರಿ ಸಿಬ್ಬಂದಿಯೋರ್ವ ಆರಾಮವಾಗಿ ಕುಳಿತು ಬಜ್ಜಿ ತಿನ್ನುವುದು ಕೂಡ ವೀಡಿಯೊದಲ್ಲಿದೆ.

"ಮಧ್ಯವರ್ತಿಗಳು, ದಲ್ಲಾಳಿಗಳು ಕಚೇರಿಯಲ್ಲಿ ಕಂಡುಬಂದರೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ತುರ್ತಾಗಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು" ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ ಮಾತು(ಆದೇಶ) ಉಳಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

Edited By : Nirmala Aralikatti
Kshetra Samachara

Kshetra Samachara

06/03/2022 09:45 pm

Cinque Terre

22.05 K

Cinque Terre

2

ಸಂಬಂಧಿತ ಸುದ್ದಿ