ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಬ್ಲಿಕ್ ನೆಕ್ಸ್ಟ್ ಕ್ರೈಂ ಫಾಲೋಅಪ್: ಪತ್ನಿ ಪೀಡಕನ ತಾಯಿ ಹೇಳುವುದೇನು?

ವಿಶೇಷ ವರದಿ: ರಹೀಂ ಉಜಿರೆ

ಕುಂದಾಪುರ: ಕುಂದಾಪುರದಲ್ಲಿ ಇತ್ತೀಚೆಗೆ ನಡೆದ ಪತ್ನಿ ಪೀಡಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಭಾರೀ ಆಕ್ರೋಶ ಕೇಳಿ ಬಂದಿತ್ತು. ಸಿಗರೇಟ್‌ನಿಂದ ಪತ್ನಿಯ ಮುಖವನ್ನು ಸುಡಲು ಯತ್ನಿಸುತ್ತಿರುವ ದೃಶ್ಯ ವಿಡಿಯೋದಲ್ಲಿತ್ತು. ನಂತರ ಪ್ರದೀಪ್ ಪತ್ನಿ ಪ್ರಿಯಾಂಕ, ಕುಂದಾಪುರ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳದ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರದೀಪ್ ಹಾಗೂ ಆತನ ತಂದೆ ಬಂಧನ‌ ಕೂಡ ಆಗಿತ್ತು.

ಆದರೆ ಇದು ವರದಕ್ಷಿಣೆ ಕಿರುಕುಳ ಅಲ್ವೇ ಅಲ್ಲ. ಈ ವಿಡಿಯೋಗೂ ವರದಕ್ಷಿಣೆಗೂ ಸಂಬಂಧವೇ ಇಲ್ಲ ಅನ್ನೋದು ಪ್ರದೀಪ್ ತಾಯಿ ಮಾಡುತ್ತಿರುವ ವಾದ. ಮಗ ಮತ್ತು ಪ್ರಿಯಾಂಕ ಪ್ರೀತಿಸಿ ಮದುವೆಯಾದ ಬಳಿಕ ಆಕೆ ತಾಯಿ ಮನೆಗೆ ಹೋಗಿಯೇ ಇರಲಿಲ್ಲ. ನಾವು ಅವಳನ್ನು ಮಗಳಂತೆ ನೋಡುತ್ತಿದ್ದೆವು. ಈ ನಡುವೆ ಪ್ರಿಯಾಂಕ ತಾಯಿ ಪ್ರದೀಪ್‌ಗೆ ಆತ ಕೆಲಸ ಮಾಡೋ ಸ್ಥಳದಲ್ಲೇ ಎಲ್ಲರ ಮುಂದೆ ಬೈದಿದ್ದಾಳೆ. ಇದೇ ಕೋಪದಲ್ಲಿ ಹಿಂಸೆ ಕೊಡುವ ವಿಡಿಯೋ ಆತನೇ ಮಾಡಿದ್ದಾನೆ. ಆದರೆ ಪ್ರಿಯಾಂಕಗೆ ಸಿಗರೇಟ್‌ನಿಂದ ಮುಖ ಸುಟ್ಟಿಲ್ಲ, ಇದುವರೆಗೂ ಹೊಡೆದಿಲ್ಲ. ಈಗ ಪ್ರಿಯಾಂಕ ವರದಕ್ಷಿಣೆ ಕಿರುಕುಳ ಅಂತ ದೂರು ನೀಡಿ ನನ್ನ ಗಂಡ ಹಾಗೂ ಮಗನನ್ನು ಜೈಲಿಗೆ ಹಾಕಿಸಿದ್ದಾಳೆ. ಆಕೆ ಹೇಳುವಂತೆ ವರದಕ್ಷಿಣೆ ಕಿರುಕುಳ ಹೌದಾದ್ರೆ ಪ್ರಿಯಾಂಕ ಧರ್ಮಸ್ಥಳ ಮುಂಜುನಾಥನ ಸನ್ನಿಧಿಯಲ್ಲಿ ಅಥವಾ ಗ್ರಾಮ ದೇವರಲ್ಲಿ ಬಂದು ಪ್ರಯಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇತ್ತ, ಪತಿ ಮನೆಯಿಂದ ದೂರವಾದ ಪ್ರಿಯಾಂಕ ಅಜ್ಜಿ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ನಾನು ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲ. ಆತ ಹಿಂಸೆ ನೀಡ್ತಾನೆ. ಆತನಿಗೆ ಡಿವರ್ಸ್ ನೀಡ್ತೀನಿ ಎಂದು ಹಠ ಹಿಡಿದಿದ್ದಾಳೆ.

ಒಟ್ಟಿನಲ್ಲಿ, ಪ್ರೀತಿಸಿ ಮದುವೆಯಾದ ಜೋಡಿ ಮದುವೆ ಆದ ಐದೇ ತಿಂಗಳಲ್ಲಿ ದೂರವಾದರೆ, ಇತ್ತ ಮಗ ಹಾಗೂ ಗಂಡ ಇಬ್ಬರೂ ಜೈಲುಪಾಲಾದ ಕಾರಣ ಪ್ರದೀಪ್ ತಾಯಿ ಮನೆಯಲ್ಲೇ ಏಕಾಂಗಿಯಾಗಿ ವ್ಯಥೆ ಪಡುವಂತಾಗಿದೆ.

Edited By : Nagesh Gaonkar
PublicNext

PublicNext

03/03/2022 08:51 am

Cinque Terre

46.07 K

Cinque Terre

6

ಸಂಬಂಧಿತ ಸುದ್ದಿ