ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಮಂಗಳೂರು ವಿವಿ ಆವರಣದಲ್ಲಿ ನಡೆದಿರುವ ಶ್ರೀಗಂಧದ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳುವಾಯಿ ಮೂಲದ ಸದ್ಯ ಕೆ.ಸಿ. ನಗರ ನಿವಾಸಿ ಮಜೀದ್ ಅಲಿಯಾಸ್ ನವಾಜ್, ಬಂಟ್ವಾಳ ನಿವಾಸಿ ಶರೀಫ್ ಅಲಿಯಾಸ್ ದುನಿಯಾ ಶರೀಫ್, ವರ್ಕಾಡಿ ನಿವಾಸಿ ಲಕ್ಷ್ಮಣ ಶೆಟ್ಟಿ ಬಂಧಿತರು.
ಫೆ. 4ರ ರಾತ್ರಿ ವೇಳೆ ಆರೋಪಿಗಳು ಶ್ರೀಗಂಧದ ಮರಗಳವು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆದು ಸುಮಾರು 25 ಸಾವಿರ ರೂ. ಮೌಲ್ಯದ 41.1 ಕೆಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೆ, 2020 - 2021ರಲ್ಲಿ ಮಂಗಳೂರು ವಿವಿ ಆವರಣದಲ್ಲಿ ಶ್ರೀ ಗಂಧದ ಮರ ಕಳವು ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
Kshetra Samachara
07/02/2022 03:25 pm